Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಂತ್ರಿಗಳನ್ನು ಕೈ ಬಿಡುವುದು, ಹೊಸದಾಗಿ ನೇಮಿಸುವುದು ಸಿಎಂಗೆ ಪರಮಾಧಿಕಾರವಿದೆ ಸಚಿವ ಎಸ್.ಟಿ. ಸೋಮಶೇಖರ

localview news

ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ನಿರ್ಧೆಶನದಂತೆ ಮುಕ್ತ ವ್ಯಾಪಾರಕ್ಕೆ ವರ್ತಕರಿಗೆ ಅವಕಾಶ ನೀಡಿದೆ. ಇದರಿಂದ ಪೈಪೋಟಿ ದರದಲ್ಲಿ ರೈತರಿಗೆ ದರ ಸಿಗಲಿದ್ದು, ಎಲ್ಲಿಯೂ ರೈತರಿಂದ ವಿರೋಧ ಬಂದಿಲ್ಲ. ವರ್ತಕರ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದ್ದಾರೆ. ಇಲ್ಲಿನ ಎಪಿಎಂಸಿ ಕಾರ್ಯಾಲಯಕ್ಕೆ ಬೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಪಿಎಂಸಿ ಯಾರ್ಡನಲ್ಲಿ ವಹಿವಾಟು ನಡೆಸುವ ವರ್ತಕರು ಹೊರಗಡೆ ಖರೀದಿಗೆ ಶುಲ್ಕವಿಲ್ಲ, ಆವರಣದಲ್ಲಿ ಖರೀದಿಸಿದಲ್ಲಿ 1.5 ಶುಲ್ಕ ವಿಧಿಸುತ್ತಿರುವ ಕುರಿತು ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ, ಸಚಿವ ಸಂಪುಟದಲ್ಲಿ 1 ರೂ. ಇಳಿಕೆ ಮಾಡಿದೆ. ಸಂಪೂರ್ಣ ಶುಲ್ಕರಹಿತ ಮಾಡಲು ಸಾದ್ಯವಾಗಲ್ಲ. ಎಪಿಎಂಸಿ ಸಿಬ್ಬಂದಿ ವೇತನ, ರೈತರಿಗೆ ಮೂಲಭೂತ ಸೌಲಭ್ಯ, ಎಪಿಎಂಸಿ ಬೆಳವಣಿಗೆಗೆ ಹಣಕಾಸು ಬೇಕಿದೆ ಎಂದರು. ಇಲ್ಲಿನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಪರೀಕ್ಷೆಯ ಪ್ರಯೋಗಾಲಯ (ಲ್ಯಾಬ್) ಅಗತ್ಯವಿದೆ. ವರ್ತಕರು ಬೇಡಿಕೆ ಸಲ್ಲಿಸಿದ್ದು, ಕೂಡಲೇ 4 ಕೋ.ರೂ.ವೆಚ್ಚದಲ್ಲಿ ಪ್ರಯೋಗಾಲಯ (ಲ್ಯಾಬ್) ಆರಂಭಿಸಲು ಮಂಜೂರಾತಿ ನೀಡುವೆ. ಮಾರುಕಟ್ಟೆ ಅಭಿವೃದ್ದಿಗೆ 10 ಕೋ.ರೂ.ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ರಾಜ್ಯದಲಿ 800 ಸಿಬ್ಬಂದಿಗಳು ಕೊರತೆಯಿದ್ದು, ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದರು. ಮಾರುಕಟ್ಟೆ ಬೆಳವಣಿಗೆ ಹಾಗೂ ವರ್ತಕರ, ರೈತರ ಅನುಕೂಲಕ್ಕಾಗಿ ಶೀಘ್ರದಲ್ಲೆ ಮೆಣಸಿನಕಾಯಿ ಪರೀಕ್ಷೆಯ ಪ್ರಯೋಗಾಲಯಕ್ಕೆ (ಲ್ಯಾಬ್) ಮಂಜೂರಾತಿ ನೀಡುವುದಾಗಿ ಹೇಳಿದರು. ಮಾರುಕಟ್ಟೆಯಲ್ಲಿ ರಿಯಾಯ್ತಿ ದರದಲ್ಲಿ ಕ್ಯಾಂಟೀನ್ ಆರಂಭಿಸುವ ಕುರಿತು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಪ್ರಥಮ ಬಾರಿಗೆ ಮೈಸೂರು ಎಪಿಎಂಸಿಯಲ್ಲಿ ರಿಯಾಯ್ತಿ ದರದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ. ರೈತರಿಗೆ, ಕೂಲಿಕಾರರಿಗೆ 5 ರೂ.ತಿಂಡಿ, 10 ರೂ.ಊಟ ಸಿದ್ದಪಡಿಸಿ ವಿತರಿಸಲಾಗುವುದು. ಮೈಸೂರಲ್ಲಿ ಸ್ಥಳೀಯ ವರ್ತಕರು ಹಾಗೂ ಆಡಳಿತ ಮಂಡಳಿ ಸಹಕಾರದಿಂದ ಆರಂಭಿಸಲಾಗುತ್ತಿದೆ. ಆಯಾ ಮಾರುಕಟ್ಟೆಯಲ್ಲಿ ವರ್ತಕರು ಸಹಕರಿಸಿದಲ್ಲಿ ರಾಜ್ಯದೆಲ್ಲೆಡೆ ಆರಂಭಿಸಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕಾಗಿ ಸಚಿವರು ಹಣ ಮಾಡುತ್ತಿದ್ದಾರೆ ಲೆಕ್ಕ ಕೊಡಿ ಎನ್ನುತ್ತಿದ್ದಾರೆ. ನಮ್ಮ ಸರ್ಕಾರ ಲೆಕ್ಕ ನೀಡಲು ಸಿದ್ದವಿದೆ ಎಂದರು. ಮಂತ್ರಿಗಳನ್ನು ಕೈಬಿಡುವುದು, ಹೊಸದಾಗಿ ನೇಮಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ, ಇದಕ್ಕೆ ನಾ ಏನೂ ಹೇಳಲಾರೆ ಎಂದರು. ಈ ವೇಳೆ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಯು.ಬಿ.ಬಣಕಾರ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಉಪಾಧ್ಯಕ್ಷೆ ಉಳಿವೆಪ್ಪ ಕುರುವತ್ತಿ, ವಿಜಯ ಮಾಳಗಿ, ಪುರಸಭೆ ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ನಿಂಗನಗೌಡ್ರ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ್ರ, ಪ್ರಭುಗೌಡ್ರ ಸೇರಿದಂತೆ ಇತರರು ಹಾಜರಿದ್ದರು.