Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್ ಅವಕಾಶ ನೀಡಲು ಒತ್ತಾಯ

localview news

ಬೆಳಗಾವಿ:2015ನೇ ಸ್ಕೀಮಿನ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ಅವಕಾಶ ನೀಡಲು ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈಗಾಗಲೇ ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್ ಡೌನ್ ಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ವಿಧಾನ, ಶೈಕ್ಷಣಿಕ ಭವಿಷ್ಯ ಅತ್ಯಂತ ಅತಂತ್ರವನ್ನು ಅನುಭವಿಸಿತ್ತು ಮತ್ತು ಹಲವು ಏರು ಪೇರುಗಳನ್ನು ಕಂಡಿತ್ತು. ರಾಜ್ಯದ ವಿದ್ಯಾರ್ಥಿಗಳ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಹಲವು ಸವಾಲುಗಳನ್ನು ಎದುರಿಸಿ ವಿದ್ಯಾರ್ಥಿಗಳು ಆಯಾ ಕೋರ್ಸಿನ ಅಂತಿಮ ಪರೀಕ್ಷೆಗಳನ್ನು ಬರೆದು ಮುಂದಡಿ ಇಡುತ್ತಿದ್ದಾರೆ. ಇಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳ ಒಂದು ನಿರ್ದಿಷ್ಟ ಬ್ಯಾಚ್ ನ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಪ್ರಸ್ತುತ 4 ವಿಷಯಗಳಗಿಂತ ಹೆಚ್ಚು ಅನುತಿರ್ಣರಾದವರಿಗೆ ಮುಂದಿನ ತರಗತಿಗಳಿಗೆ ಅರ್ಹತೆ ಇರುವುದಿಲ್ಲ. ಆದರೆ, ಈ ಕೊರೋನ ಸಂಕಷ್ಟದ ವಿಷೇಶ ಸಂಧರ್ಭದಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ 4 ಕ್ಕು ಮೀರಿದ ವಿಷಯಗಳಲ್ಲಿ ಅನುತ್ತೀರ್ಣರಾದ 2015ನೇ ಸ್ಕೀಮ್ ನ ವಿದ್ಯಾರ್ಥಿಗಳು 2020ನೇ ಸ್ಕೀಮ ನ ಸಿಲಬಸ್ ಓದುವ ಅನಿವಾರ್ಯತೆಗೆ ತಳ್ಳಲ್ಪಡುತ್ತಾರೆ. 2020 ಸ್ಕೀಮ್ ನಲ್ಲಿ ಪಠ್ಯಕ್ರಮ ಪರಿಷ್ಕರಿಸಿರುವುದರಿಂದ ಹಳೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಈ ವರ್ಷವನ್ನು ವಿಶೇಷವೆಂದು ಪರಿಗಣಿಸಿ, 2015ನೇ ಸ್ಕೀಮ್ ನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ನಿರ್ದೇಶಕರು, ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಇವರಿಗೆ ಮನವಿ ಸಲ್ಲಿಸಲಾಯಿತು ಪ್ರತಿಭಟನೆಯಲ್ಲಿ ಎಐಡಿಎಸ್ಓ ಸಂಘಟನಾಕಾರರಾದ ವೈಭವ್, ಲಖನ್ ಮುನವಳ್ಳಿ, ಸುದೀಪ್ ಸುತಾರ್ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.