Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪೊಲೀಸ್ ಇಲಾಖೆಯ 977 ಜಾಡಮಾಲಿ (Sweepers) ನೌಕರರನ್ನು ಮರು ನೇಮಕಗೊಳಿಸುವಂತೆ ವಿನಂತಿ

localview news

1) ಸರಕಾರದ ಆದೇಶ ಸಂಖ್ಯೆ ಆಇಟಿಎಫ್ ಪಿ 2017, ದಿ: 07-07-2017 2) ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಪತ್ರ ಸಂಖ್ಯೆ : ಲೆಕ್ಕ 1/17/2017-18 2: 03/07/2019.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸತತ 20-30 ವರ್ಷಗಳಿಂದ ಮಾಸಿಕವಾಗಿ 3500. ರೂ ವೇತನ ಪಡೆದು ಕಾರ್ಯನಿರ್ವಹಿಸುತ್ತಿದ್ದ 977 ಅಂಶಕಾಲಿಕ ಜಾಡಮಾಲಿ ನೌಕರರನ್ನು ಉಲ್ಲೇಖಿತ-1ರ ಸರಕಾರದ ಆದೇಶದಂತೆ ಸೇವೆಯಿಂದ ಏಕಾ-ಏಕಿ ವಜಾಗೊಳಿಸಿ: ಸೇವಾಗುತ್ತಿಗೆ ಹೊರಗುತ್ತಿಗೆ ನೀಡಲು ಆದೇಶ ಹೊರಡಿಸಿದ್ದಾರೆ.

ಅದರಂತೆ ಈಗ ಪ್ರಸ್ತುತ ಇವರನ್ನು ಸೇವೆಯಿಂದ ವಜಾಗೊಳಿಸಿದ್ದು. ಮಾನ್ಯ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬೆಂಗಳೂರು ರವರ ಉಲ್ಲೇಖಿತ-2 ರ ಪ್ರಸ್ತಾವಣೆ ಪತ್ರ ಸಂಖ್ಯೆ-ಲೆಕ್ಕ-1/17/2017-18,ರ ಸಮಸಂಖ್ಯೆ ಪತ್ರ,ದಿನಾಂಕ-01-07-2019 03 12-2019. 07-04-2020, 04-06-2020, 17-08-2020, 01-10-2020, 23-12,2020 (ಪ್ರತಿಗಳು ಲಗತ್ತಿಸಲಾಗಿದೆ) ಪ್ರಸ್ತಾವನೆಯನ್ನು ಕೋರಿರುವಂತೆ ಉಲ್ಲೇಖಿತ-1 ರ ಸರಕಾರದ ಆದೇಶದಿಂದ ಪೊಲೀಸ್ ಇಲಾಖೆಗೆ ವಿನಾಯಿತಿ ನೀಡಿ, ಸೇವಾಗುತ್ತಿಗೆ ಹೊರಗುತ್ತಿಗೆ ಪಡೆಯುವ ಬದಲಿಗೆ ಈ ಹಿಂದೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ 977 ಮಂದಿ ಅಂಶಕಾಲಿಕ ಜಾಡಮಾಲಿಗಳನ್ನು ಗ್ರೂಪ್ "ಡಿ" (ಪರ್) ಹುದ್ದೆಗೆ ನೇಮಿಸುವಂತೆ ಹಾಗೂ ಜಾಡಮಾಲಿ ಎಂಬ ಪದದ ಹುದ್ದೆಯನ್ನು “ಕಛೇರಿ ನಿರ್ವಹಣಾ ಸಹಾಯಕರು" ಎಂದು ಪದನಾಮ ಬದಲಿಸುವಂತೆ ವಿವರವಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಈ ಬಗ್ಗೆ ಸರಕಾರದ ಆದೇಶವನ್ನು ಶೀಘ್ರವಾಗಿ ಆದೇಶ ಹೊರಡಿಸುವಂತೆ ಈ ಮೇಲಿನಂತೆ ಕೋರಿದ್ದಾರೆ.

ಅದರಂತೆ ಮಾನ್ಯ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನೀರಿಕ್ಷಕರು ಬೆಂಗಳೂರು ರವರು ಮೇಲಿನಂತೆ ಕೋರಿರುವ ಪ್ರಸ್ತಾವನೆಯನ್ನು ಸಹಾನುಭೂತಿಯಿಂದ ಮಾನವೀಯ ದೃಷ್ಟಿಯಿಂದ ಉಲ್ಲೇಖಿತ-2ರ ಡಿಜಿಐಜಿಪಿ ರವರ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆಗೊಳಿಸಿ ಸಹಮತಿ ನೀಡಿ ಪರಿಗಣಿಸುವಂತೆ ಮತ್ತು ನಾವುಗಳು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ 977 ಜಾಡಮಾಲಿಗಳನ್ನು ಮರು ನೇಮಕಗೂಳಿಸಿ ನಮ್ಮ ಬಹು ದಿನಗಳ ಬೇಡಿಕೆಯಾದ ಈ ಬಗ್ಗೆ ಸರಕಾರದ ಆದೇಶವನ್ನು ಶೀಘ್ರವಾಗಿ ಹೊರಡಿಸಬೇಕೆಂದು ಸಮಸ್ಯೆ 977 ವಿನಂತಿಪೂರ್ವಕವಾಗಿ ವಿನಂತಸಿಕೊಳ್ಳುತ್ತೇನೆ. ಬಡ ಜಾಡಮಾಲಿಗಳ ಕುಟುಂಬಗಳು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.