3356 ಮತಗಳಿಂದ ಗೆಲುವಿನ ನಗೆ ಬೀರಿದ ಚೆನ್ನರಾಜ ಹಟ್ಟಿಹೋಳಿ
ಚಿಕ್ಕೋಡಿ: ಬೆಳಗಾವಿಯಲ್ಲಿ ರಮೇಶ್ ಜಾರಕಿಹೋಳಿ ಪ್ಲಾನ್ ಅಟ್ಟರ್ ಪ್ಲಾಫ ಆಗಿದ್ದು, ಬೆಳಗಾವಿಯಲ್ಲಿ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಗೆಲುವು ಹಿನ್ನೆಲೆಯಲ್ಲಿ ಲಖನ್ ಜಾರಕಿಹೋಳಿ ಸ್ಪರ್ಧೆ ಮಾಡಿದ್ದರು ಆದರೆ ಮೊದಲ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಚೆನ್ನರಾಜ ಹಟ್ಟಿಹೋಳಿ ಗೆಲುವು ಸಾದಿಸಿದ್ದಾರೆ.
ಸಹೋದರನ ಗೆಲುವಿನಿಂದ ಲಕ್ಷ್ಮಿ ಹೆಬ್ಬಾಳಕರ ಪುಲ್ ಖುಷ್ಆಗಿದ್ದಾರೆ, ಮೊದಲ ಬಾರಿಗೆ ಚೆನ್ನರಾಜ ಹಟ್ಟಿಹೋಳಿ ವಿಧಾನ ಪರಿಷತ್ ಆಯ್ಕೆ ಆಗಿದ್ದಾರೆ. 3356 ಮತಗಳಿಂದ ಗೆಲುವಿನ ನಗೆ ಬೀರಿದ ಚೆನ್ನರಾಜ ಹಟ್ಟಿಹೋಳಿ, ಎರಡನೆ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಹೊಸ ಟ್ವಿಸ್ಟ್ ಬರಲಿದ್ದು ಕಾದು ನೋಡ್ ಬೇಕಿದೆ.
ಎರಡನೆಯ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಲಖನ್ ಜಾರಕಿಹೋಳಿ ಮತ್ತು ಬಿಜೆಪಿಯ ಮಹಂತೇಶ್ ಕವಟಗಿಮಠ ನಡುವೆ ನಡೆಯಲಿರುವ ಪೈಪೋಟಿಯಲ್ಲಿ ಮತ್ತಷ್ಟು ಮತಗಳು ಚೆನ್ನರಾಜ ಹಟ್ಟಿಹೋಳಿ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.