ರಮೇಶಗೆ ಬಿಜೆಪಿ ಸೋಲಿಸಬೇಕೆಂಬ ಗುರಿ ಇತ್ತು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ.
ಬೆಳಗಾವಿ :ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಸೋಲಿಸಬೇಕೆಂಬ ಗುರಿ ಇತ್ತು. ಆದ ಕಾರಣ ಅವರು ನನ್ನ ಹೆಸರು ಹೇಳುತ್ತಿದ್ದರು. ಅವರು ಹೇಳಿದ್ದು ಉಲ್ಪಾ ಇರುತ್ತದೆ. ಅವನು ಕಾಂಗ್ರೆಸ್ ಅಲ್ಲ, ಬಿಜೆಪಿ ಸೋಲಿಸಿ ಅಧಿಪತ್ಯ ಮಾಡಲು ಹೊರಟ್ಟಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಚನರಾಜ ಹಟ್ಟಿಹೊಳಿ ಗೆಲವು ಸಾಧಿಸಿದ್ದಾರೆ. ನಿರೀಕ್ಷೆಗೂ ಮೀರಿ ಗೆಲವು ಸಾಧಿಸಿದ್ದೇವೆ ಎಂದು ಸಮೂಹ ನಾಯಕತ್ವದಿಂದ ಹಾಗೂ ಎಲ್ಲ ಕಾರ್ಯಕರ್ತರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೆಲವು ಸಾಧಿಸಲು ಪ್ರಮುಖ ಕಾರಣವಾಗಿದೆ ಎಂದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತದಾನದ ಎರಡು ದಿನದ ಮುಂಚೆಯೇ ಬಂದು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಕಾರಣವಾಯಿತು. ಹತ್ತು ದಿನ ಮುಂಚಿತವಾಗಿ ಬಂದಿದ್ದರೇ ಅನಕೂಲವಾಗುತ್ತಿತ್ತು ಎಂದರು.
ಕಾಂಗ್ರೆಸ್ ಮುಳುಗುವ ಹಡುಗು ಎಂದವರಿಗೆ ಈಗ ಏನು ಹೇಳುತ್ತಾರೆ ಅವರಿಗೆ ಕೇಳಬೇಕು. ಇದು ಮುಂಬರುವ ವಿಧಾನ ಸಭೆಯ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗಟ್ಟಿಯಾಗಿದೆ. ಜಿಲ್ಲೆಯಲ್ಲಿ ಗಟ್ಟಿಯಾಗಿದೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬರುವುದು ನಿಶ್ಚಿತ ಎಂದು ಹೇಳಿದರು.