Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪೊಲೀಸ್ ವ್ಯವಸ್ಥೆ ಪರಿಶೀಲನೆ ಮಾಡಿದ ಗೃಹ ಸಚಿವ

localview news

ಬೆಳಗಾವಿ :ಕರ್ನಾಟಕ ವಿಧಾನಸಭೆ 10 ದಿನ ಸದನ. ಅದರ ಹಿಂದೆ ಅನೇಕ ಪರಿಶ್ರಮ ಇದೆ. ಗೃಹ ಇಲಾಖೆ, ಪೊಲೀಸರು 24ಗಂಟೆ ಕರ್ತವ್ಯ ಮಾಡುತ್ತಾರೆ. ಕಳೆದ ಬಾರಿ ವಸತಿ ರೆಡಿ ಶೆಡ್ ಸಿಕ್ಕಿತ್ತು ಈ ಬಾರಿ ಕೃತಕ ವಸತಿ ಸೌಲಭ್ಯ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕೊಂಡುಸ್ಕೊಪ್ಪ ನಲ್ಲಿ ನಿರ್ಮಿಸಲಾದ ಪೊಲೀಸ್ ವಸತಿ ವೀಕ್ಷಣೆ ಮಾಡಿದ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದರು. 5 ಸಾವಿರ ಜನ ಪೊಲೀಸರ ನಿಯೋಜನೆ ಮಾಡಿದ್ದೇವೆ. ಕೆ ಎಸ್ ಆರ್ ಪಿ ಹಾಗೂ ಸಿವಿಲ್ ಸೇರಿದಂತೆ ವಿವಿಧ ಇಲಾಖೆಯವರನ್ನ ನೇಮಕ ಮಾಡಿದ್ದೇವೆ. ಈ ಭಾಗದ ಕಷ್ಟ ಸರ್ಕಾರಕ್ಕೆ ಮುಟ್ಟಿಸಲು ಪ್ರತಿಭಟನೆ ಅನೇಕ ನಡೆಯಲಿದೆ. ಅವುಗಳೆಲ್ಲವನ್ನ ನೋಡಬೇಕಿದೆ ಎಂದರು. ಕುಟುಂಬ ಬಿಟ್ಟು ಪೊಲೀಸ್ ಸಿಬ್ಬಂದಿ ಬಂದಿದ್ದಾರೆ. ಅವರಿಗೆ ಊಟ, ವಸತಿ ಎಲ್ಲಾ ಸೌಕರ್ಯ ನೀಡಲಾಗಿದೆ. ಮಂಚ, ನೀರು, ಶೌಚಾಲಯ, ಊಟ ಎಲ್ಲವನ್ನೂ ನೀಡಬೇಕಿದೆ. ಎಲ್ಲವನ್ನೂ ನಮ್ಮ ಇಲಾಖೆ ಸಮರ್ಥವಾಗಿ ಮಾಡಿದ್ದಾರೆ ಎಂದು‌ ಹೇಳಿದರು. ಇಲ್ಲಿ ಜಾಗದ ಕೊರತೆ ಇದೆ. ಬಂದವರಿಗೆ ಶಾಶ್ವತ ವ್ಯವಸ್ಥೆ ಮಾಡಬೇಕಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ಶಾಶ್ವತ ವ್ಯವಸ್ಥೆ ಇದೆ, ಅದೇ ರೀತಿ ಆಗಬೇಕಿದೆ. ಒಳ್ಳೆಯ ಬ್ಲಾಂಕೆಟ್ ಎಲ್ಲವನ್ನೂ ನೀಡಲಾಗಿದೆ. ಮೂರುವರೆ ಕೋಟಿ ವೆಚ್ಚ ಮಾಡಿದ್ದೇವೆ ಎಂದರು. ಮತಾಂತರ ಬಿಲ್ ಜಾರಿಗೆ ತರುವ ವಿಚಾರ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಇಂದು ಬಿಜೆಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ಆಗಲಿದೆ.ಸ ದನದಲ್ಲಿ ಮಂಡನೆ ಮಾಡೋ ಮೊದಲು ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.

ಬಿಲ್ ಯಾಕೆ ತರುತ್ತಿದ್ದೇವೆ ಅಂತ ನಮ್ಮ ಶಾಸಕರಿಗೂ ತಿಳಿಸಬೇಕಿದೆ. ಬಿಲ್ ತರುವಾಗ ಎಲ್ಲರೂ ಒಟ್ಟಿಗೆ ಇರುತ್ತೇವೆ ಎಂದು ಹೇಳಿದರು. 

ಎಂಇಎಸ್ ಮುಖಂಡನಿಗೆ ಮಸಿ ಬಳಿದ ವಿಚಾರ. ಕನ್ನಡ ಪರ ಹೋರಾಟಗಾರನ ಮೇಲೆ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಪೊಲೀಸ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಶಿವಸೇನೆ ಇಂದ ಕನ್ನಡ ಧ್ವಜ ಸುಟ್ಟ ವಿಚಾರ.

ಕನ್ನಡ ಧ್ವಜ ಸುಟ್ಟಿದ್ದು ಸರಿಯಲ್ಲ. ಇಂತಹ ಕೀಟಲೆ ಪದೇ ಪದೇ ಮಾಡ್ತಿರ್ತಾರೆ. ಇಲ್ಲಿ ಮರಾಠಿ, ಕನ್ನಡಿಗರು ಅನ್ನೋ ಬೇದ ಇಲ್ಲದೆ ಒಟ್ಟಿಗೆ ಇದ್ದಾರೆ.ಆದ್ರೆ ಅದರ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಶಾಂತಿ ಕದಡುವಂತವರನ್ನ ಮಟ್ಟ ಹಾಕುತ್ತೇವೆ ಎಂದರು.