ಬೇಡ ಜಂಗಮ ಬೇಡಿಕೆ ಈಡೇರಿಸದಿದ್ದರೇ ವಿಧಾನಸೌಧಕ್ಕೆ ಮುತ್ತಿಗೆಯ ಎಚ್ಚರಿಕೆ
ಬೆಳಗಾವಿ :ಡಿಸೆಂಬರ್ ಒಳಗೆ ಕಾನೂನು ಬದ್ಧವಾಗಿ ಬೇಡ ಜಂಗಮ ಸಮಯದಾಯಕ್ಕೆ ಪ್ರಮಾಣ ಪತ್ರ ನೀಡುವುದಾಗಿ ಸರಕಾರ ಸೂತ್ತೋಲೆ ಹೊರಡಿಸದಿದ್ದರೇ ಜನೇವರಿಯಲ್ಲಿ ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಡಿ.ಹಿರೇಮಠ ಸರಕಾರಕ್ಕೆ ಗಡವು ನೀಡಿದರು.
ಬುಧವಾರ ಸುವರ್ಣ ವಿಧಾನ ಸೌಧದ ಕೊಂಡಸಕೊಪ್ಪನ ಪ್ರತಿಭಟನಾ ಸ್ಥಳದಲ್ಲಿ ಅಖಿಲ ಭಾರತ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ನಡೆಸಲಾಗುತ್ತಿರುವ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೂ ಸಾಮಾಜಿಕ, ಶೈಕ್ಷಣಿಕವಾಗಿ ಬೇಡಜಂಗಮ ದಾಖಲಾತಿ ಇದ್ದರೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸಿಗದಿರಲು ಕೆಲ ರಾಜಕಾರಣಿಗಳ ಕಾಣದ ಕೈಗಳ ಕೈವಾಡ ಇದೆ ಎಂದು ಹರಿಹಾಯ್ದರು.
ನ್ಯಾಯಾಂಗದಲ್ಲಿ ಬೇಡಜಂಗಮದ ಪರ ತೀರ್ಪು ಬಂದರೂ ಜನಪ್ರತಿನಿಧಿಗಳಾದ ಸಚಿವ ಗೋವಿಂದ್ ಕಾರಜೋಳ, ಶಾಶಕ ಪಿ.ರಾಜೀವ ಅಪಸ್ವರ ಎತ್ತಿದ್ದು ಬೇಡ ಜಂಗಮ ಸಮುದಾಯ ಹಾಗೂ ನ್ಯಾಯಾಲಯದ ತೀರ್ಪಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸರಕಾರಕ್ಕೆ ಚರ್ಚೆ ನಡೆಸುವಂತೆ ಆಹ್ವಾನ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದು ಸರಕಾರ ಅಧಿಕಾರಿಗಳಿಗೂ ತಿಳಿದಿದೆ. ಆದರೆ ಬೇಡಜಂಗಮ ಪ್ರಮಾಣ ಪತ್ರ ನೀಡಲು ಮೀನಾಮೇಷ ಏಣಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಬೇಡ ಜಂಗಮ ಪ್ರಮಾಣ ಪತ್ರ ನೀಡಿದಂತೆ ಸದನದಲ್ಲಿ ಕೆಲ ಜನಪ್ರತಿನಿದಿಗಳು ಒಳಸಂಚು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಡಿ.22 ರಂದು ಕೆಲವರು ಜಾತಿ ಸಂಘರ್ಷ ಮಾಡಲು ಹುನ್ನಾರ ನಡೆಸಿದ್ದಾರೆ.
ನ್ಯಾಯಾಲಯದ ತೀರ್ಪಿನ ವಿರುದ್ಧ ಮಾತನಾಡಿದರೆ ಬೇಡ ಜಂಗಮದವರು ಬೀದಿಗೆ ಬಂದು ಉಗ್ರವಾದ ಹೋರಾಟ ನಡೆಸುವುದಾಗಿ ಅಲ್ಲದೆ, ಜನೇವರಿಯಲ್ಲಿ ಬೆಂಗಳೂರಿನ ವಿಧಾನ ಸೌಧಕ್ಕೆ ಬೇಡ ಜಂಗಮರು ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಅಖಲಿ ಕರ್ನಾಟ ಡಾ. ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿಯ ಅಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ ಮಾತನಾಡಿ, ಬೇಡ ಜಂಗಮದ ಸಮುದಾಯ ಎಲ್ಲರೂ ಒಗ್ಗಟ್ಟಾಗಬೇಕು.
ಎಲ್ಲ ತಾಲೂಕಿನಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಸರಕಾರಕ್ಕೆ ಒತ್ತಾಯ ಮಾಡೋಣ. ಬೇಡ ಜಂಗಮನರು ನಿಜಾಮುದ್ದಿನರ ಕಾಲದಿಂದಲೂ ಇದೆ. ಆದರೆ ಕೆಲ ರಾಜಕೀಯ ಕುತಂತ್ರದಿಂದ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಹಿಂದೆಟ್ಟು ಹಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.