Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಮಿಸಲಾತಿ ಒದಗಿಸಲು ಮನವಿ

localview news

ಬೆಳಗಾವಿ : ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಹಾಗೂ ವಾಲ್ಮೀಕಿ ರಾಜ್ಯ ಯುವ ಘಟಕ ಈ ಕೇಳಗಿನ 4 ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದೆ.

1.ಕರ್ನಾಟಕ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವು ಸುಮಾರು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಶ್ರೀ ನಾಗಮೋಹನದಾಸ್ ವರದಿಯಂತೆ ವಾಲ್ಮೀಕಿ ಜನಾಂಗಕ್ಕೆ 7.5% ಮಿಸಲಾತಿ ವಿಳಂಬ ಮಾಡದೆ ಜಾರಿಗೆ ತರಬೇಕು.
2.ಗಂಡುಗಲಿ ಕುಮಾರರಾಮ 13ನೇ ಶತಮಾನದಲ್ಲಿ ಕುಮ್ಮಟ ದುರ್ಗದ ಆಡಳಿತದಲ್ಲಿ ನೆರವಾಗಿದ್ದು, ಹಿಂದು ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಕೊಟ್ಟು ದಕ್ಷಿಣ ಪ್ರಾಂತ್ರದಲ್ಲಿ ಹಿಂದು ಸಾಮ್ರಾಜ್ಯವನ್ನು ಪುನರುತ್ತಾನಗೊಳಿಸಿ ಉತ್ತಮವಾದ ಆಡಳಿತವನ್ನು ನೀಡಿ, ರಾಜ್ಯಕ್ಕಾಗಿ ತನ್ನ ಪ್ರಾಣವನ್ನೆ ಮುಡಿಪಾಗಿಟ್ಟು, ದೇಶದ ಅಭಿವೃದ್ಧಿಗಾಗಿ ಹೂರಾಡಿದ ಗಂಡುಗಲಿ ಕುಮಾರ ರಾಮನ ಕುಮ್ಮಟ ದುರ್ಗದಲ್ಲಿಯ ಸ್ಥಳವನ್ನು ಅಭಿವೃದ್ಧಿ ಗೊಳಿಸುವಂತೆ ಹಾಗೂ ಸದರಿ ಸ್ಥಳವನ್ನು ಪ್ರವಾಸಿ ಸ್ಥಾನವನ್ನಾಗಿಸುವಂತೆ ವಿನಂತಿಸಿದ್ದಾರೆ.
3.ವೀರ ಸಿಂಧೂರ ಲಕ್ಷ್ಮಣ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಸರ್ಕಾರದ ವಿರದ್ಧ ಹೋರಾಡಿ, ಇವರು ಬಡ ಜನರಿಗಾಗಿ ನ್ಯಾಯ ಒದಗಿಸಿದವರು. ಅವರ ಹೋರಾಟ ಮತ್ತು ಬಲಿದಾನದ ನೆನಪಿಗಾಗಿ ಗೌರವ ಅರ್ಪಿಸುವುದಕ್ಕಾಗಿ ಬೆಳಗಾವಿ ರೈಲ್ವೆ ನಿಲ್ದಾಣವನ್ನು"ವೀರ ಸಿಂಧೂರ ಲಕ್ಷ್ಮಣ ರೈಲ್ವೆ ನಿಲ್ದಾಣ' ಎಂದು ಹೆಸರಿಸಲು ಮತ್ತು ಅವರ ಒಂದು ಮೂರ್ತಿಯನ್ನು ರೈಲ್ವೆ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲು ಕ್ರಮ ಕೈಗೊಳಬೇಕೆಂದು ವಿನಂತಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಯಿಸುತ್ತಿರುವ (ಸದ್ಯ ಸರ್ಕಾರದಿಂದ ಆದೇಶ ಪಡೆದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ ಇಲ್ಲಿ ನಿಯೋಜನೆಯ ಮೇರೆಗೆ ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿರುವ) ಡಾ./ಶ್ರೀ ಶ್ರೀಧರ ಬಿನ್ ಬಸವರಾಜ ಬಸವಣ್ಣೆಪ್ಪಾ ಭಜಂತ್ರಿ ಇವರು ತಹಶೀಲ್ದಾರ್, ಧಾರವಾಡ ರವರಿಂದ ಪರಿಶಿಷ್ಟ ಪಂಗಡದ "ಕೊಲೆಗೆ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದು ಪೊಲೀಸ್ ಅಧೀಕ್ಷಕರು, ನಾಹಜಾನಿ, ಬೆಳಗಾವಿ, ಪ್ರಾದೇಶಿಕ ರವರ ವಿಚಾರಣ ಕಾಲದಲ್ಲಿ ದೃಢಪಟ್ಟಿರುತ್ತದೆ. ಮುಂದಿನ ಕ್ರಮ ಜರುಗಿಸಲು ಮಾನ್ಯ ಜಿಲ್ಲಾಧಿಕಾರಿಗಳು, ಧಾರವಾಡ ಇವರಿಗೆ ಪತ್ರ ಸಂಖ್ಯೆ: ಜಾವಿ/39/ಬಿಜೆಎಂ/ವಾಹಜಾನಿ/2020 ದಿನಾಂಕ 19/112021 ರ ಮೂಲಕ ಅದೇಶಿಸಲಾಗಿರುತ್ತದೆ. ಅವರನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ ಕ್ರಿಮಿನಲ್ ಮೊಕ್ಕದ್ದಮೆಯನ್ನು ದಾಖಲಿಸುವುದು ಮತ್ತು ಅವರ ಆಸ್ತಿ ಪರಿಶಿಲಿಸುವ ಕುರಿತು ವಿನಂತಿ ನೀಡಿದ್ದಾರೆ.