Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪುಂಡಾಟಿಕೆ‌ ಮಾಡುವ ಸಂಘಟನೆಗಳ ಮೇಲೆ ಚಾಟಿ‌ ಬಿಸುವ ಅಗತ್ಯ ಸರಕಾರಕ್ಕೆ ಇಲ್ಲವೇ...?

localview news

ನಾಡ್ರೋಹಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಏಕೆ..?

ಸ್ಥಳೀಯ ವೈಯಕ್ತಿಕ ರಾಜಕಾರಣದ ಸಮಸ್ಯೆಯೇ...?

ಪುಂಡಾಟಿಕೆ‌ ಮಾಡುವ ಸಂಘಟನೆಗಳಿಗೆ ಚಾಟಿ‌ ಬಿಸುವ ಅಗತ್ಯ ಸರಕಾರಕ್ಕೆ ಇಲ್ಲವೇ...?

ಇದಕ್ಕೆ ಸರಕಾರವೇ ಉತ್ತರಿಸಬೇಕು.


ಲೋಕಲ್ ವ್ಯೂವ್ ಪೋಕಸ್.

ಬೆಳಗಾವಿ: ಗಡಿ ವಿಷಯ ನ್ಯಾಯಾಲಯದಲ್ಲಿರುವ ಕನ್ನಡ ನಾಡಿನಲ್ಲಿರುವ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲು ಹಿಂದಟ್ಟು ಹಾಕುತ್ತಿರುವುದು ಏಕೆ ಎನ್ನುವುದು ಕನ್ನಡಿಗರ ಪ್ರಶ್ನೆಯಾಗಿದೆ.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ನಾಲ್ಕು ಜನ ಎಂಇಎಸ್ ಶಾಸಕರಿದ್ದರೇ ಸರಕಾರದ ಶವ ಯಾತ್ರೆ ಮಾಡುವುದಾಗಿ ಪುಂಡಾಟಿಕೆ‌‌ ಮೆರೆದಿದ್ದ ಎಂಇಎಸ್ ನ ಬಾಲ ಆಗಲೇ‌ ಚುವುಟಿದ್ದರೇ ಸದ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರಲಿಲ್ಲ ಎನ್ನುವುದು ಕೊರಗು ಕನ್ನಡಿಗರದ್ದಾಗಿದೆ.

ಕರುನಾಡಿನ ಜನರು ವಿಶಾಲ್ ಹೃದಯವಂತರು, ಎಲ್ಲ ಭಾಷಿಕ ಜನರು ಕುಂದಾನಗರಿಯಲ್ಲಿದ್ದಾರೆ. ಬಹು ಸಂಖ್ಯೆಯಲ್ಲಿ ಮರಾಠಿಗರು ಇದ್ದರೂ ಎಂಇಎಸ್ ಪರ ಯಾರೂ ಇಲ್ಲ. ಆದರೆ, ಮರಾಠಿಗರನ್ನು ಮುಂದಿಟ್ಟುಕೊಂಡು ಶಾಂತಿ‌ ಕದಡುವ ನಾಡದ್ರೋಹಿ ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಏಕೆ‌ ಹಿಂದೆಟ್ಟು ಹಾಕುತ್ತಿದೆ ಎನ್ನುವ ಪ್ರಶ್ನೆ ಕನ್ನಡಿಗರಲ್ಲಿ ಉದ್ಬಬವಾಗುವುದು ಸಹಜ.

ಗಡಿ, ಗುಡಿ ಬೆಳಗಾವಿಯಲ್ಲಿ ಪ್ರತಿ ಬಾರಿ ಅದ್ದೂರಿಯಾಗಿ ಆಚರಿಸುವ ರಾಜ್ಯೋತ್ಸವದ ದಿನದಂದು ಕರಾಳ ದಿನಾಚಾರಣೆ ಆಚರಿಸುವ ನಾಡ್ರೋಹಿಗಳು, ಸರಕಾರ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ವೇಳೆ ಬೆರಳಣಿಕೆಯ ಜನರನ್ನು ಇಟ್ಟುಕೊಂಡು ಪುಂಡಾಟಿಕೆ ಮೆರೆಯುವ ಎಂಇಎಸ್ ವಿರುದ್ಧ ಕಠಿಣ ಕ್ರಮ‌ ಜರುಗಿಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಈ ನಾಡದ್ರೋಹಿಯ ಬೀಜ ಮುಂದೆ ವಿಧಾನ ಸಭೆಯ ಚುನಾವಣೆಯ ವೇಳೆ ಹೆಡೆ ಬಿಚ್ಚುವುದು ನಿಶ್ಚಳ ಎಂದು ಕನ್ನಡರಿಗರ ಆಕ್ರೋಶದ ಮಾತುಗಳಾಗಿವೆ.

ಕನ್ನಡ ನಾಡು, ನುಡಿ, ರಕ್ಷಣೆ ಮಾಡುವುದು ಸರಕಾರದ‌ ಕರ್ತವ್ಯ. ಆದರೆ ಕೆಲ ರಾಜಕಾರಣಿಗಳು ಮತ ಬ್ಯಾಂಕ್ ಗಾಗಿ ಎಂಇಎಸ್ ಪರ ವಾಲಿರುವುದು, ಅವರ ರಕ್ಷಣೆ‌‌‌ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ. ಕನ್ನಡಿಗರ ಹಿತ ಕಾಯಬೇಕಿದ್ದ ಜನಪ್ರತಿನಿಧಿಗಳು ಬೆರಳಣಿಕೆಯ ಪುಂಡ ಎಂಇಎಸ್ ನವರ ಮತಗಳನ್ನು ಪಡೆಯುವ ಉದ್ದೇಶದಿಂದ ಅವರ ವಿರುದ್ಧ ಗಟ್ಟಿ ನಿಲುವು ತಾಳದೇ ಇರುವುದು ಕನ್ನಡಗರ ಸಿಟ್ಟಿಗೆ ಕಾರಣವಾಗಿದೆ.

ಬೆಳಗಾವಿಯಲ್ಲಿ ಕನ್ನಡ, ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಇವರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವ ಕಿಡಿಗೇಡಿಗಳ ಸಂಘಟನೆ, ನಾಡದ್ರೋಹಿ ಎಂಇಎಸ್ ಗೆ ಸರಕಾರ ಚಳಿ ಬಿಡಿಸಿ ಪಾಠ ಕಲಿಸುವ ಅತ್ಯಗತ್ಯ ಇದೆ ಎಂದು‌ ಹಿರಿಯ ಕನ್ನಡ ಹೋರಾಟಗಾರರು ಆಗ್ರಹಿಸಿದ್ದಾರೆ.