ಗ್ರಾಮ ವಿದ್ಯುತ್ ಪ್ರತಿನಿಧಿಗಳ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ
ಬೆಳಗಾವಿ:ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗುರುವಾರ ಅಖಿಲ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಡಬ್ಲೂ.ಪಿ ನಂ 43037-43041/2015 ಇಸಿಆರ್ ಎಸ್ ನ್ನು ಪರಿಗಣಿಸಬೇಕು.
ನ್ಯಾಯಾಲಯ ಆದೇಶದ ವಿರುದ್ಧ ಎಲ್ಲಾ ವಿದ್ಯುತ್ ಸರಬರಾಜ ಕಂಪನಿಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಆದೇಶವನ್ನು ಎತ್ತಿ ಹಿಡಿದು ನಮ್ಮ ಜೀವನಕ್ಕೆ ಸರಕಾರ ದಾರಿ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಾಲಯದ ಆದೇಶ ಮಾಡಿದ ದಿನಾಂಕದಿಂದ ಅನ್ವಯವಾಗುವಂತೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವುದರೊಂದಿಗೆ ಹಾಗೂ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಶೀಘ್ರದಲ್ಲೇ ಈ ಆದೇಶ ನೀಡಿ ಖಾಯಂಗೊಳಿಸಬೇಕು.
ಕೊರೊನಾದಿಂದ ಮೃತಪಟ್ಟ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕುಟುಂಬಕ್ಕೆ ಸರಕಾರ ಅರ್ಥಿಕ ಪರಿಹಾರ ನೀಡಬೇಕೆಂದಿ ಆಗ್ರಹಿಸಿದರು. ಕಾಂತರಾಜು ಎಚ್.ಎನ್, ಶಿವಶಂಕರ ಗೂಳಿ, ನಿರಂಜನ, ರಾಘವೇಂದ್ರ ಎ. ನಾಗರಾಜ ಸಿ, ಸಂಗಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.