ಮೊಟಾರ ಸೈಕಲ್ ನೊಂದಿಗೆ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ
ಗೌವಳಿ ಸಮುದಾಯದ ಪರಂಪರೆ ಮುಂದುವರೆಸಲು ಮೊಟಾರ್ ಸೈಕಲ್ ನೊಂದಿಗೆ ಎಮ್ಮೆ ಓಡಿಸುವ ಸ್ಪರ್ಧೆಗೆ ಗುರುವಾರ ಅದ್ದೂರಿ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್, ಜಸ್ವೀರ್ ಸಿಂಗ್, ಮಾಜಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ಮನೋಳ್ಕರ್, ಅಶೋಕ್ ತೋರ್ವಾಟ್, ರಾಜೇಶ ಪಾಟೀಲ್, ನಗರ ಸೇವಿಕೆ ವಿನಾ ಬಿಜಾಪುರೆ, ಬಾಪು ಪಾಟೀಲ್, ಅಬಾ ಜಂಗವಳಿ, ಲಕ್ಷ್ಮಣ ಭಟ್ಕಂಡೆ, ಸಚಿನ್ ಹಾವಶಿಕರ ಉಪಸ್ಥಿತರಿದ್ದರು.
ಆರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ, ರಿಬ್ಬನ್ ಕತ್ತರಿಸುವ ಮೂಲಕ ಸ್ಪರ್ಧೆ ಆರಂಭಿಸಲಾಯಿತು. ಸ್ವಯಂಭು ಗವಳಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಓಂಕಾರ ನಗರ ಶಿವಂ ನಗರ ಪದಾಧಿಕಾರಿಗಳು ಮತ್ತುನೂರಾರು ಗವಳಿ ಬಂಧುಗಳು ಉಪಸ್ಥಿತರಿದ್ದರು