ಹಿಂದುಗಳ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದ್ದಾರೆ: ಶಾಸಕ ಠಾಕೂರ
ಬೆಳಗಾವಿ: ದೇಶದಲ್ಲಿ ಬ್ರಿಟಿಷರು ಹೋದರು. ಆದರೆ ಈ ಕಾಂಗ್ರೆಸ್ ಪಕ್ಷದವರನ್ನು ಬಿಟ್ಟು ಹೋದರು. ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಶಾಸಕ ರಾಜಾಸಿಂಗ ಠಾಕೂರ ಹೇಳಿದರು. ರವಿವಾರ ನಗರದ ಹೊರವಲಯದಲ್ಲಿರುವ ನಾವಗೆಯಲ್ಲಿ ಹಿಂದೂ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗಾವಿಯ ನೆಲ ಪುಣ್ಯ, ವೀರಭೂಮಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆ ವೇಳೆಯೂ ನಮ್ಮಲ್ಲಿ ದ್ರೋಹಿಗಳು ಇದ್ದರು ಎಂದು ಹೇಳಿದರು. ಮತಾಂತರ ಸಮಯದಲ್ಲಿ ಮಹಾತ್ಮ ಬಸವೇಶ್ವರರು ಜನ್ಮ ತಾಳಿದ್ದರು.
ಆದರೆ ಈಗ ಕೆಲವರು ನಮ್ಮ ನಮ್ಮ ಮಧ್ಯೆ ಜಗಳ ಹಚ್ಚಲು ಯತ್ನಿಸುತ್ತಾರೆ.ಕನ್ನಡ ಮರಾಠಿ ಮಧ್ಯೆ ಷಡ್ಯಂತ್ರ ನಡೆಯುತ್ತಿದೆ ಇದನ್ನ ನೆನಪಿನಲ್ಲಿಟ್ಟುಕೊಳ್ಳಿ. ನಾನು ನಿಮಗೆ ಒಂದು ಕೆಲಸ ಒಪ್ಪಿಸಲು ಬಯಸುತ್ತೇನೆ. ದೇಶ, ಧರ್ಮದ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡಬೇಕು ದೇಶದಲ್ಲಿ ಮೋದಿ ಸರ್ಕಾರ ಇದೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ ಧರ್ಮಕ್ಕೆ ಸಂಕಟ ಬಂದಾಗ ಸರ್ಕಾರ ಮುಂದೆ ಬರಲ್ಲ ನೀವೆ ಮುಂದೆ ಬರಬೇಕು.ಧರ್ಮಕ್ಕೆ ಸಂಕಷ್ಟ ಬಂದಾಗ ನೀವೇ ಕೈಯಲ್ಲಿ ತಲ್ವಾರ್ ಹಿಡಿದು ಹೊರ ಬರಬೇಕು ಎಂದು ಕರೆ ನೀಡಿದರು.
ನಮ್ಮ ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಕಾರ್ಯಕರ್ತ ಸಂಕಲ್ಪ ಪಡಬೇಕು. ನಾನು ಪ್ರತಿ ಗ್ರಾಮಕ್ಕೆ ತೆರಳಿ ಒಂದು ಸೇನಾ ನಿರ್ಮಾಣ ಮಾಡುವೆ ಅಂತಾ. ಮತಾಂತರ ತಡೆಯಲು ಸೇನೆ ನಿರ್ಮಾಣ ಮಾಡುವೆ ಅಂತಾ ಸಂಕಲ್ಪ ಮಾಡಬೇಕು ಕಾರಣ ದುಡ್ಡು ನೀಡಿ ಮತಾಂತರ ಮಾಡಲಾಗುತ್ತಿದೆ.
ಹಿಂದೂ ಹುಡುಗಿಯರಿಗೆ ಮೋಸ ಮಾಡುವಂತೆ ಪಿಎಫ್ಐ ಯುವಕರಿಗೆ ಟ್ರೇನಿಂಗ್ ಕೊಟ್ಟು ಲವ್ ಜಿಹಾದ್ ಮಾಡ್ತಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಡೇಂಜರಸ್ ಸಂಘಟನೆ.ಶಸ್ತ್ರಾಸ್ತ್ರ ಹಿಡಿದು ಕೇರಳದಲ್ಲಿ ಪಿಎಫ್ಐ ಪಥಸಂಚಲನ ಕಾರ್ಯಕ್ರಮ ಮಾಡಿತ್ತು ಸಂಸದರಾದ ಮಂಗಳಾ ಅಂಗಡಿ, ಶಾಸಕ ಅನಿಲ ಬೆನಕೆ, ಬಿಜೆಪಿ ನಾಯಕರಾದ ಪೃಥ್ವಿ ಸಿಂಗ್, ಧನಂಜಯ ಜಾಧವ ಹಾಜರಿದ್ದರು.