ಪಪಂ ಚುನಾವಣೆಯಲ್ಲಿ ಪಕ್ಷೇತರರ ಕಮಾಲ್
ಬೆಳಗಾವಿ: ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲಿ ಅತೀ ದೊಡ್ಡ ಜಿಲ್ಲೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಯ ಸ್ಥಳೀಯ ನಗರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಪಕ್ಷೇತರರು ಪಾರುಪತ್ಯ ಮೆರೆದಿದ್ದಾರೆ. ಅರಬಾವಿಯಲ್ಲಿ 16 ಸ್ಥಾನಗಳ ಪೈಕಿ 5 ಬಿಜೆಪಿ, ಕಾಂಗ್ರೆಸ್ 0 ಹಾಗೂ ಪಕ್ಷೇತರರು 11 ಸ್ಥಾನಗಳಲ್ಲಿ ಜಯಬೇರಿ ಬಾರಿಸಿದ್ದಾರೆ.
ಕಲ್ಲೋಳಿ ಪಪಂಯಲ್ಲಿ 16 ಸ್ಥಾನಗಳ ಪೈಕಿ ಬಿಜೆಪಿ5, ಕಾಂಗ್ರೆಸ್ 0 ಹಾಗೂ ಪಕ್ಷೇತರರು 11 ಸ್ಥಾನಗಳಲ್ಲಿ ಜಯಬೇರಿ ಬಾರಿಸಿದ್ದಾರೆ.
ನಾಗನೂರು ಪಪಂನ 17 ಸ್ಥಾನಗಳಲ್ಲಿ ಬಿಜೆಪಿ 0, ಕಾಂಗ್ರೆಸ್ 0 ಹಾಗೂ ಪಕ್ಷೇತರರು 17ರಲ್ಲಿ ಗೆಲವು ಸಾಧಿಸಿದ್ದಾರೆ.