ಜಿಲ್ಲಾಧಿಕಾರಿ ಆವರಣದ ರಸ್ತೆಗಳ ಸುಧಾರಣೆಗೆ ವಕೀಲರ ಆಗ್ರಹ
ಬೆಳಗಾವಿ: ಡಿ.ಸಿ. ಆಫೀಸ್ ಬಾಜು ಹಾಗೂ ಸಬ್ ರಿಜಿಸ್ಟರ ಕಛೇರಿ ಮುಂದೆ ಹಾಗೂ ಹಳೆಯ ಜಿಪಂ ಆಫೀಸ್ ಹಾಗೂ ಚವಾಟಗಲ್ಲಿ ಹಾಗೂ ಡಿ.ಸಿ. ಕಪೌಂಡ ರಸ್ತೆಗಳು ಹದಿಗೆಟ್ಟರುವುದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಶುಕ್ರವಾರ ನ್ಯಾಯವಾದಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಡಿ.ಸಿ. ಆಫೀಸ್ ಬಾಜು ಹಾಗೂ ಸಬ್ ರಿಜಿಸ್ಟರ ಕಛೇರಿ ಮುಂದೆ ಹಾಗೂ ಹಳೆಯ ಜಿಪಂ ಕಚೇರಿ ಹಾಗೂ ಚವಾಟಗಲ್ಲಿ ಇತರ ಡಿ.ಸಿ. ಕಪೌಂಡ ರಸ್ತೆಗಳು ಹದಿಗೆಟ್ಟದ್ದು, ರಸ್ತೆಗಳಲ್ಲಿ ಸಾಕಷ್ಟು ತಗ್ಗು ಅದ್ದು ರಸ್ತೆಗಳಲ್ಲಿ ವಾಹನ ಸಂಚರಿಸಲು ಹಾಗೂ ಹೋಗಿ ಬರುವ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದರಿಂದ ದಿನಾಲು ಕಿರುಕೋಳ ಅಪಘಾತವಾಗುತ್ತಿದ್ದು ಹೋಗಿ ಬರುವ ವಾಹನಗಳು ಸ್ಥಿಡ ಆಗಿ ಬೀಳುತ್ತಿದ್ದು ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಕಾರಣ ಆ ರಸ್ತೆಗಳು ಜಿಲ್ಲಾ ಪರಿಷತ್ ಹಾಗೂ ಕೋರ್ಟ ಮುಖಾಂತರ ಹೋಗುವ ರಸ್ತೆಗಳೂ ಕೂಡಾ ಹದಗೆಟ್ಟದ್ದು ತೆಗ್ಗು ದಿನ್ನೆಗಳಗಾಗಿದ್ದು ವಾಹನ ಚಲಿಸಲು ಕಷ್ಟವಾಗುತ್ತಿವೆ. ಕಳೆದ 2 ವರ್ಷಗಳಿಂದ ಆ ರಸ್ತೆಗಳು ರಿಪೇರಿ ಆಗದೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಕಾರಣ ತ್ವರಿತವಾಗಿ ಈ ರಸ್ತೆಗಳನ್ನು ರಿಪೇರಿ ಮಾಡಿ ಜನರಿಗೆ ಹೋಗಿ ಬರಲು ಅನೂಕೂಲ ಮಾಡಬೇಕೆಂದು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.