ನಗರದಲ್ಲಿ ಭೀಮಾ ಕೋರೆಗಾಂವ್ ವಿಜಯದ ದಿನ ಆಚರಣೆ
ಬೆಳಗಾವಿ: ವಿವಿಧ ದಲಿತ ಸಂಘಟನೆಗಳ ವತಿಯಿಂದ ಭೀಮಾ ಕೋರೆಗಾಂವ್ ವಿಜಯದ ದಿನವನ್ನು ಶನಿವಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು ಕರೋನಾ ವಾರಿಯರ್ ಆಗಿ ಪೃಥ್ವಿ ಸಿಂಗ್ ಮತ್ತು ಸಾಮಾಜಿಕ ಕಾರ್ಯಕರ್ತ ದಲಿತ ನಾಯಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊ.ಕೆ.ಡಿ.ಮಂತ್ರೇಶಿ ಅವರು ಭೀಮಾ ಕೋರೆಗಾಂವ್ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಇತಿಹಾಸ ಕುರಿತು ವಿಚಾರ ಮಂಡಿಸಿದರು.
ಅರ್ಜುನ್ ದೇಮಟ್ಟಿ, ಮಲ್ಲೇಶ ಕುರಂಗಿ, ಬಸವರಾಜ ರಾಯಗೋಳ, ಸಿದ್ಧಪ್ಪ ಕಾಂಬಳೆ, ಅಶೋಕ ಮಣಿಕೇರಿ, ಎಂ.ಆರ್.ಕಲಪತ್ರಿ ಸೇರಿದಂತೆ ದಲಿತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.