Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಕೊನೆಯ ಅವಕಾಶ

localview news

ಅಥಣಿ : ರಾಜ್ಯ ಸರ್ಕಾರವು ಅಥಣಿ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಎಲ್ಲ ಅಂತ್ಯೋದಯ ಪಿ.ಎಚ್.ಎಚ್. (ಬಿ.ಪಿ.ಎಲ್) ಮತ್ತು ಎನ್.ಪಿ.ಎಚ್.ಎಚ್ (ಎ.ಪಿ.ಎಲ್) ಪಡಿತರ ಚೀಟಿದಾರರ ಇ-ಕೆ.ವೈ.ಸಿ ಸಂಗ್ರಹಣೆ ಬಗ್ಗೆ ಮೇಲಿಂದ ಮೇಲೆ ನಿರ್ದೇಶನಗಳನ್ನು ನೀಡುತ್ತಿದೆ,ಆದರೂ ಸಹ ಅಥಣಿ ತಾಲ್ಲೂಕಿನ ಇ-ಕೆ.ವೈ.ಸಿ ಪ್ರಗತಿಯು ಶೇ.87,90 ರಷ್ಟು ಆಗಿದೆ . ಕಾರಣ ಸರ್ಕಾರವು ಕಾರ್ಡುದಾರರಿಗೆ ಇ-ಕೆವೈಸಿ ನೀಡಲು ವಿಧಿಸಲಾದ ಗಡುವನ್ನು ಅಂತಿಮ ಬಾರಿಗೆ ದಿನಾಂಕ:10-01-2022 ರವರೆಗೆ ಪುನಃ ವಿಸ್ತರಿಸಿರಿದೆ.

ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲ ಪಡಿತರ ಚೀಟಿದಾರರಿಗೆ ಕೆಳಗಿನಂತೆ ತಿಳಿಸಿದ್ದಾರೆ
ದಿನಾಂಕ:10-01-2022 ರ ಒಳಗಾಗಿ ತಮ್ಮ ಕುಟುಂಬದ ಇ-ಕೆವೈಸಿ ಆಗದೇ ಇರುವ ಎಲ್ಲ ಸದಸ್ಯರ ಬಯೋಮೆಟ್ರಿಕ್ ಹೆಬ್ಬರಳ ಗುರುತನ್ನು (ಇ-ಕೆ.ವೈ.ಸಿ) ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ದಾಖಲಿಸಲು ಸೂಚಿಸಲಾಗಿದೆ. ಅದಲ್ಲದೆ ಇದು ಪಡಿತರ ಚೀಟಿದಾರರಿಗೆ ಇ-ಕೆವೈಸಿ ನೀಡಲು ಕೊನೆಯ ಅವಕಾಶವಾಗಿದೆ. ತಪ್ಪಿದಲ್ಲಿ ಬಯೋಮೆಟ್ರಿಕ್ (ಇ-ಕೆ.ವೈ.ಸಿ) ನೀಡದ ಸದಸ್ಯರ ಪಡಿತರ ಆಹಾರ ಧಾನ್ಯಗಳನ್ನು ಕಡಿತಗೊಳಿಸಿ ಹಂಚಿಕೆ ನೀಡಿದ್ದಲ್ಲಿ ಇದಕ್ಕೆ ಕಾರ್ಡುದಾರರೇ ನೇರ ಹೊಣೆಗಾರರು ಎಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ. ಇ-ಕೆವೈಸಿ ಕುರಿತು ದೂರುಗಳಿದ್ದಲ್ಲಿ ಈ ಕಛೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ.