ರೈತರು, ವ್ಯಾಪಾರಿಗಳಿಗೆ ನೀಡಿದ ಸಾಲದಿಂದ ನೊಂದು ಮೃತಪಟ್ಟ ವ್ಯಾಪಾರಿಗೆ ಪರಿಹಾರ ನೀಡುವಂತೆ ಒತ್ತಾಯ
ಬೆಳಗಾವಿ: ರೈತರು ಹಾಗೂ ವ್ಯಾಪರಸ್ಥರಿಗೆ ಸಾಲ ನೀಡಿದ ಸಾಲ ಮರಳಿ ಹಿಂಪಡಿಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೃಷಿ ವ್ಯಾಪಾರಸ್ಥ ನಾಗನಗೌಡ ಪಾಟೀಲ ಮಾನಸಿಕವಾಗಿ ನೊಂದು ಅಸ್ವಾಭಾವಿಕ ಮರಣ ಹೊಂದಿದ್ದು ಸರಕಾರ ಅವರಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಅಗ್ರೋ ವ್ಯಾಪಾರಸ್ಥರ ಸಂಘ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೃಷಿ ಪರಿಕರಗಳ ವ್ಯಾಪಾರಸ್ಥರಾದ ನಾಗನಗೌಡ ಪಾಟೀಲ ಇವರು ಹುಬ್ಬಳ್ಳಿಯಲ್ಲಿ ವ್ಯಾಪಾರ ಮಾಡುವಾಗ ರೈತರು ಮತ್ತು ವ್ಯಾಪಾರಸ್ಥರ ಬಾಕಿ ಹಣ ಬರಲಾರದ ಕಾರಣ ಇವರು ಮನನೊಂದು ಮಾನಸಿಕವಾಗಿ ಮೃತಪಟ್ಟಿದ್ದಾರೆ.
ಅವರ ಮಕ್ಕಳಿಗೆ ಶಿಕ್ಷಣ ಮತ್ತು ಮನೆ ನಡೆಸಲು ಸರಕಾರ ಅವರಿಗೆ ಧನ ಸಹಾಯದ ಮೂಲಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕರವೇ ಪ್ರವೀಣ ಶೆಟ್ಟಿ ಬಣದ ವ್ಯಾಪಾರಿ ಘಟಕದ ಜಿಲ್ಲಾಧ್ಯಕ್ಷ ಡಾ.ಬಾಳಸಾಹೇಬ ಉದಗಟ್ಟಿ, ಉಮೇಶ ಮಾಯಾನಚ್ಚಿ, ಅರವಿಂದ ಬಾತ್ಕಾಂಡೆ, ಎಚ್.ವಿ.ವೀರಕ್ತಮಠ, ಗೋವಿಂದ್ ನೀಲಾಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.