Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಕಲಚೇತನರಿಗೆ ರಿಯಾಯಿತಿ ನೀಡಿದ ಸರಕಾರ

localview news

ಕೊಪ್ಪಳ: ಕೋವಿಡ್ 19 ರ ರೂಪಾಂತರಿ ವೈರಸ್ " ಓಮಿಕ್ರಾನ್" ವೈರಾಣು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿಕಲಚೇತನ ನೌಕರರು ಮನೆಯಿಂದ ಕಚೇರಿಗೆ ಬಂದು ಕಾರ್ಯ ನಿರ್ವಹಿಸಲು ತೊಂದರೆ ಆಗುವುದನ್ನು ಗಮನಿಸಿ ಸರಕಾರವು ವಿಕಲಚೇತನ ನೌಕರರಿಗೆ ಕಚೇರಿ/ ಶಾಲೆಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ ಅವರು ಆದೇಶ ಮಾಡಿದ್ದು ಜನವರಿ 18 ರ ವರಗೆ ಜಾರಿಯಲ್ಲಿ ಇರುತ್ತದೆ.ಈ ಆದೇಶವು ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನ ನೌಕರರಿಗೆ ಅನ್ವಯವಾಗುತ್ತದೆ.ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿದ್ದಾರೆ.