Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕ್ರೀಡೆ ದೇಹಕ್ಕೆ ನವಚೈತನ್ಯ ನೀಡುತ್ತವೆ: ರಾಹುಲ್

localview news

ಹುಕ್ಕೇರಿ:ಕ್ರೀಡೆಗಳು ನಮ್ಮ ದೇಹಕ್ಕೆ ನವಚೈತನ್ಯ ನೀಡುತ್ತವೆ. ಅವುಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ. ಯುವಕರು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಯಮಕನಮರಡಿ ಮತಕ್ಷೇತ್ರದ ರಾಜಕಟ್ಟಿ ಗ್ರಾಮದಲ್ಲಿ ರಾಹುಲ್‌ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹಾಪ್‌ ಪೀಚ್‌ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು.

ದೇಶದ ಸರ್ವತೋಮುಖ ಪ್ರಗತಿ ಯುವಜನರ ಕೈಯಲ್ಲಿದೆ. ಅವರು ಒಗ್ಗಟ್ಟಿನಿಂದ ಮುನ್ನುಗ್ಗಿದರೆ ಸಾಧನೆ ಮಾಡಲಾರದೆ ಇರುವುದು ಯಾವುದೂ ಇರುವುದಿಲ್ಲ. ಕ್ರೀಡೆಗಳು ಯುವಜನರಲ್ಲಿ ಏಕತೆ ತರಲಿಕ್ಕೆ ಸಹಕಾರಿಯಾಗಲಿವೆ ಎಂದರು.

ಏಕಾಗ್ರತೆ, ಸಂಘಟಿತವಾದ ಹೋರಾಟದಿಂದ ಜಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾಗಿರುತ್ತವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಎದುರಾಗುವಂತಹ ಎಲ್ಲ ಒತ್ತಡಗಳನ್ನು ನಿಭಾಯಿಸಲಿಕ್ಕೆ ಕ್ರೀಡೆಗಳಿಂದ ಸಾಧ್ಯವಾಗುತ್ತದೆ ಎಂದರು.

ಈ ಮೊದಲು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು, ಮಹಿಳೆಯರು ಆರತಿ ಎತ್ತಿ ರಾಹುಲ ಜಾರಕಿಹೊಳಿ ಅವರನ್ನು ಸ್ವಾಗತಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು.