Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕ್ಷಮಿಸಿ - ನಳಿನಿ ಎಂಬ ನನ್ನ ಜೀವನ ವೃತ್ತಾಂತ

localview news

ನನ್ನ ಬದುಕಿನ ಪ್ರಾರಂಭದಲ್ಲಿ ನನಗೆ ನೆನಪಿರುವ ಧ್ವನಿಯೇ, ಮನೆಯ ಹೊರಗಡೆ ಊರ ಜನರ ಕೂಗಾಟದ ಜೊತೆ ನಮ್ಮಪ್ಪನ ಕರ್ಕಶ ಅಳುವಿನ ಧ್ವನಿ.

ಆಗ ನನಗಿನ್ನು 5 ವರ್ಷ. ಬೆಳಗ್ಗೆ ಇನ್ನೂ ನಿದ್ರೆಯಲ್ಲಿದ್ದೆ. ಈ ಅಳು ಕೇಳಿ ಎಚ್ಚರವಾಗಿ ಗುಡಿಸಿಲಿನಿಂದ ಹೊರ ಬಂದಾಗ ನಾನು ನೋಡಿದ ದೃಶ್ಯ, ನಾಲಿಗೆ ಹೊರಚಾಚಿ ಮರದ ಕೊಂಬೆಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದ ಅಮ್ಮನ ದೇಹ.

ನನಗೇನೂ ಅರ್ಥವಾಗಲಿಲ್ಲ. ಜನರೆಲ್ಲಾ ಸೇರಿ ಅಪ್ಪನನ್ನು ಹೊಡೆಯುತ್ತಿದ್ದರು. ಸ್ವಲ್ಪ ಹೊತ್ತಿಗೆ ಪೋಲೀಸರು ಬಂದು ಅಪ್ಪನನ್ನು ಎಳೆದುಕೊಂಡು ಹೋದರು. ಅಮ್ಮನ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮತ್ತೆ ತಂದು ಮಣ್ಣಿನ ಒಳಗೆ ಮುಚ್ಚಿದರು. ಯಾರೋ ನನ್ನ ಕ್ಯೆಯಲ್ಲಿಯೂ ಮಣ್ಣಾಕಿಸಿದರು. ನನಗೆ ಅಳುಕೂಡ ಬರಲಿಲ್ಲ.

ರಾತ್ರಿಯಾಗುತ್ತಿದ್ದಂತೆ ಹಸಿವಾಯಿತು. ಭಯವೂ ಆಯಿತು. ಆಗ ಅಮ್ಮ ನೆನಪಾದಳು. ಜೋರಾಗಿ ಅಳಲಾರಂಬಿಸಿದೆ. ನನ್ನ ಅಳು ಕೇಳಿ ಪಕ್ಕದ ಮನೆಯವರು ಅವರ ಮನೆಗೆ ಕರೆದುಕೊಂಡು ಹೋಗಿ ಊಟ ಕೊಟ್ಟರು. ರಾತ್ರಿ ಅಲ್ಲೇ ಮಲಗಿದೆ. ಬೆಳಗ್ಗೆ ಊರ ಜನರೆಲ್ಲಾ ಸೇರಿ ನಾನು ಪಕ್ಕದವರ ಮನೆಯಲ್ಲಿಯೇ ಜೀತಕ್ಕಿರಬೇಕೆಂದು ತೀರ್ಮಾನಿಸಿದರು. ಅದೇ ಕ್ಷೇಮ ಎಂಬುದು ಅವರ ಸಹಾನುಭೂತಿ.

5 ವರ್ಷಕ್ಕೇ ಕಸ ಹೊಡೆಯುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಕೆಲಸ ಪ್ರಾರಂಭವಾಯಿತು. ಹೀಗೆ ಮೂರು ವರ್ಷ ಕಳೆಯಿತು.

ಇತ್ತೀಚೆಗೆ ನಾನು ರಾತ್ರಿ ಎಲ್ಲಾ ಕೆಲಸವಾದ ಮೇಲೆ ನನ್ನ ಗುಡಿಸಲಿಗೆ ಹೋಗಿ ಮಲಗುತ್ತಿದ್ದೆ. ಒಂದು ದಿನ ಅದೇ ಪಕ್ಕದ ಮನೆಯ ಕುಡುಕ ಪೋಲಿ ಮಗ ಏಕಾಏಕಿ ಗುಡಿಸಲಿಗೆ ನುಗ್ಗಿ ನಾನು ಮಿಸುಕಾಡಲು ಬಿಡದೆ ಬಾಯಿ ಮುಚ್ಚಿ, ಮಚ್ಚಿನಿಂದ ಹೆದರಿಸಿ ಅಸಭ್ಯವಾಗಿ ವರ್ತಿಸಿದ. ಗಿಡುಗನ ಕೈಗೆ ಸಿಕ್ಕ ಕೋಳಿಮರಿಯಾದೆ. ಆಗ ನಾನನುಭವಿಸಿದ ನೋವು ಹಿಂಸೆ ಕೇಳುವ ಕುತೂಹಲ ನಿಮಗಿದ್ದರೂ ಅದನ್ನು ನೆನಪಿಸಿಕೊಂಡು ಹೇಳುವ ಧೈರ್ಯ ನನಗಿಲ್ಲ.

ಮುಂದಿನ ಎರಡು ವರ್ಷ ಪ್ರತಿರಾತ್ರಿಯೂ ಇದೇ ನನ್ನ ಕರ್ಮವಾಯಿತು. ಅವನು ಹೆದರಿಸಿದ ಮಚ್ಚು, ಆ ಭಯ , ಅಭ್ಯಾಸವಾಗಿ ನನ್ನ ಬಾಯಿ ಮುಚ್ಚಿಸಿತು. ಹೇಗೋ ದಿನ ಕಳೆದೆ.

ಆಗ ನನಗೆ 10 ವರ್ಷ,ಒಂದು ದಿನ ನನ್ನ ಸಂಬಂಧಿಕರೊಬ್ಬರು ಬಂದು ನಿಮ್ಮಪ್ಪ ಜ್ಯೆಲಿನಲ್ಲಿದ್ದಾನೆ ಯಾರಾದರೂ ಲಾಯರ್ ಗೆ 5000 ಕೊಟ್ಟರೆ ಬಿಡಿಸಿಕೊಂಡು ಬರಬಹುದು ಎಂದರು. ಅಪ್ಪನನ್ನು ನೆನೆದು ದು:ಖ ಉಮ್ಮಳಿಸಿತು. ಈ ನರಕಯಾತನೆ ಕಡಿಮೆಯಾಗಲು ಅಪ್ಪ ಇರಬೇಕು ಎನಿಸಿತು. ಆದರೆ 5000 ?

ರಾತ್ರಿ ಬಂದ ಆ ಕುಡುಕನ ಬಳಿ ಹಣ ಕೇಳಿದೆ. ಆತ ನಿನ್ನ ಯೋಗ್ಯತೆ ಸಾವಿರವೂ ಇಲ್ಲ ಎಂದು ಹೀಯಾಳಿಸಿದ. ಕೊನೆಗೆ ಯೋಚಿಸಿ ಧೈರ್ಯದಿಂದ ನೀನು ಹಣಕೊಡದಿದ್ದರೆ ಎಲ್ಲರಿಗೂ ನೀನು ಇಷ್ಟು ದಿನ ನನ್ನನ್ನು ಉಪಯೋಗಿಸಿಕೊಂಡಿರುವುದನ್ನು ಹೇಳಿ ಪೋಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೆದರಿಸಿದೆ. ಆತ ಭಯ ಪಟ್ಟು ಒಂದು ವಾರದಲ್ಲಿ 4000 ಕೊಟ್ಟ. ಉಳಿದ 1000 ಬೇರೆಯವರಿಂದ ಪಡೆದು ಸಂಬಂಧಿಕರಿಗೆ ಕೊಟ್ಟೆ.

ಹಣ ಕೊಟ್ಟ ಒಂದು ತಿಂಗಳ ನಂತರ ಅಪ್ಪನನ್ನು ಕರೆದುಕೊಂಡು ಬಂದರು. ಕೃಶವಾಗಿದ್ದ ಅಪ್ಪನನ್ನು ನೋಡಿ ತಬ್ಬಿಕೊಂಡು ಗೋಳಾಡಿದೆ. ಆದರೂ ಅಪ್ಪನೇನು ಅಳಲಿಲ್ಲ. ಅಮ್ಮನ ಸಾವಿಗೆ ತಾನು ಕಾರಣನಲ್ಲವೆಂದೇ ಹೇಳುತ್ತಿದ್ದ. ಹೀಗೆ ಇನ್ನೂ 4 ವರ್ಷ ಕಳೆಯಿತು.

ನನಗಾಗ 14 ವರ್ಷ, ಅಪ್ಪ ಏನೂ ಕೆಲಸ ಮಾಡದೆ ಮನೆಯಲ್ಲಿ ನಾನು ತರುವ ಊಟ ಮಾಡಿ ಸುಮ್ಮನೆ ಇರುತ್ತಿದ್ದ. ಆದರೆ ಈಗ ಆ ಕುಡುಕ ಸೇರಿ ಇತರರ ಕಾಟ ಅಷ್ಟಾಗಿ ಇರಲಿಲ್ಲ. ಒಂದು ದಿನ ರಾತ್ರಿ ಅಪ್ಪ ಇದ್ದಕ್ಕಿದ್ದಂತೆ ಹೇಳಿದ, ನಾಳೆ ನಿನ್ನ ಮದುವೆ. ರಾಜಾಸ್ಥಾನದ ಮಾರ್ವಾಡಿಗಳು ಬಂದು ತಾಳಿ ಕಟ್ಟಿ ನಿನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ನೀನಿನ್ನು ಶ್ರೀಮಂತರ ಮನೆಯ ಮಹಾರಾಣಿ.

ನನಗೆ ತಲೆ ಸುತ್ತಿ ಬಂತು. ಇದೇನು ನಾನವರನ್ನು ನೋಡಿಯೂ ಇಲ್ಲ, ಅವರೂ ನನ್ನನ್ನು ನೋಡಿಲ್ಲ. ದಿಢೀರ್ ಮದುವೆ. ಇಲ್ಲ ಸಾಧ್ಯವಿಲ್ಲ. ಬೆಳಗ್ಗೆ ಅವರು ಬಂದಾಗ ಗಲಾಟೆ ಮಾಡೋಣ ಊರಿನವರಿಗೆಲ್ಲಾ ಹೇಳೋಣ ಎಂದು ನಿರ್ಧರಿಸಿ ಮಲಗಿದೆ.

ಆದರೆ ಬೆಳಗಿನ 5 ಕ್ಕೇ ಬಂದ ಐದು ಜನ ಕಿರಾತಕರು ನನ್ನ ಕ್ಯೆಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಾರಿನ ಸೀಟಿನ ಕೆಳಗೆ ಹಾಕಿ ನನ್ನಪ್ಪನಿಗೆ ಎಷ್ಟೋ ದುಡ್ಡು ಕೊಟ್ಟು ಹೊರಟರು. ಮಿಸುಕಾಡಲು ಆಗದೆ ಅತ್ತು ಅತ್ತು ಹಾಗೇ ನಿದ್ದೆ ಹೋಗಿದ್ದೆ.

ಎಷ್ಟೋ ಹೊತ್ತಿನ ನಂತರ ಎಚ್ಚರವಾದಾಗ ಬಾಯಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿದರು. ಅಷ್ಟರಲ್ಲಾಗಲೇ ಕಷ್ಟಗಳು ಬದುಕಿನ ಪಾಠ ಶುರು ಮಾಡಿದ್ದವು. ನನ್ನ ಬುದ್ಧಿ ಉಪಯೋಗಿಸಿ ಅವರನ್ನು ಕೇಳಿದೆ, ಒಪ್ಪಸಿದೆ. ನಾನು ಅಮಾಯಕಿ ಆದರೆ ದುಷ್ಟೆಯಲ್ಲ. ಅವರು ಹೇಳಿದಂತೆ ಕೇಳಿ ಎಲ್ಲಾ ಕೆಲಸಗಳಗೂ ಸಹಕರಿಸುತ್ತೇನೆ ಎಂದು ಕನ್ನಡ ಮಿಶ್ರಿತ ಹಿಂದಿಯಲ್ಲಿ ನಂಬಿಸಿದೆ.

ಸಂಜೆಯ ನಂತರ ಕ್ಯೆಕಾಲು ಬಿಚ್ಚಿ ತಿನ್ನಲು ಬಿಸ್ಕತ್ ಮತ್ತು ನೀರು ಕೊಟ್ಟರು. ಮತ್ತೆ ರಾತ್ರಿಯೆಲ್ಲಾ ಪ್ರಯಾಣಿಸಿ ರಾಜಾಸ್ಥಾನದ ಒಂದು ಹಳ್ಳಿ ತಲುಪಿದೆವು.ಅಲ್ಲಿಂದ ನರಕದ ಮತ್ತೊಂದು ಬಾಗಿಲು ತೆರೆಯಿತು.

ಆ ಮನೆಯ ನಾಲ್ಕು ಜನ ಅಣ್ಣ ತಮ್ಮಂದಿರ ಕಾಮುಕತೆ ತೀರಿಸುವ ಯಂತ್ರವಾದೆ. ಬೆಳಗಿನಿಂದ ಮನೆಕೆಲಸ, ರಾತ್ರಿಯಲ್ಲಿ ಆ ದಢಿಯರ ಸೇವೆ. ಬಲೂನಿನಂತಿದ್ದ ಅವರುಗಳು 4 ವರ್ಷ ಅಂದರೆ ಸುಮಾರು 1460 ದಿನ ನನ್ನನ್ನು ಭೋಗಿಸಿದರು. ಎಂಥಾ ಅನಾರೋಗ್ಯಕರ ಸ್ಥಿತಿಯಲ್ಲಿಯೂ ಅವರಿಗೆ ಎದುರಾಡಲಿಲ್ಲ. ನನ್ನದು ನಾಯಿ ನಿಷ್ಠೆಯಾಗಿತ್ತು. ಅವರ ಮನೆಯ ನಾಯಿ ನನಗಿಂತಲೂ ಉತ್ತಮ ಸ್ಥಿತಿಯಲ್ಲಿತ್ತು.

ಇದು ಸುಳ್ಳಲ್ಲ, ಎಷ್ಟೋ ಬಾರಿ ನನ್ನ ಸ್ಥಿತಿ ಅರ್ಥಮಾಡಿಕೊಂಡ ಆ ನಾಯಿಗಳೂ ಘೀಳಿಡುತ್ತಿದ್ದವು ಅಥವಾ ನನಗೆ ಹಾಗನಿಸುತ್ತಿತ್ತು.

ನನಗಾಗ 18 ವರ್ಷ, ಇದ್ದಕ್ಕಿದ್ದಂತೆ ಒಂದು ದಿನ ನನ್ನನ್ನು ಒಬ್ಬ ನರಪೇತಲ ಬ್ರೋಕರ್ ಗೆ ರೀ ಸೇಲ್ ರೀತಿ ಮಾರಿದರು. ಆತ ಎಷ್ಟೋ ದುಡ್ಡಿಗೆ ನನ್ನನ್ನು ಖರೀದಿಸಿದ. ನಾನೇನು ಪ್ರತಿಭಟಿಸಲಿಲ್ಲ. ಹೆಣ ಹೊರುವವರಿಗೆ ಹಿಂದಾದರೇನು ಮುಂದಾದರೇನು. ಆತ ನನ್ನನ್ನು ಸುಮಾರು 40 ಕಿಲೋಮೀಟರ್ ದೂರದ ಊರಿಗೆ ನಡೆಸಿಕೊಂಡು ಬರಿಗಾಲಲ್ಲಿ ಕರೆದುಕೊಂಡು ಬಂದ. ನಾನು ಚಾಕಚಕ್ಯತೆ ಉಪಯೋಗಿಸಿ ಆತನನ್ನು ಅತ್ಯಂತ ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡಿಸಿದೆ.

ಆತನ ಮನೆ ನನ್ನಂತೆ ಇನ್ನೂ 10 ನತದೃಷ್ಟರಿದ್ದ ಗೃಹ. ನಾನು ಬಹುಬೇಗ ಆ ವ್ಯವಸ್ಥೆಗೆ ಹೊಂದಿಕೊಂಡೆ. ಆ ಹತ್ತೂ ಜನರ ಪಾಲಿಗೆ 18 ರ ವಯಸ್ಸಿನ ನಾನು ತಾಯಿಯಾದೆ. ಆ ವೇಶ್ಯಾ ಗೃಹವನ್ನು ಚೆನ್ನಾಗಿ ನಡೆಸಿದೆ. ಆ ನತದೃಷ್ಟರನ್ನು ಸಮಾಧಾನಿಸಿ ಅವರಿಗೆ ಸಾಂತ್ವಾನ ಹೇಳಿ, ಆತ್ಮವಿಶ್ವಾಸ ತುಂಬಿದೆ.

ಹೀಗೆ ಮತ್ತೂ 5 ವರ್ಷ ಕಳೆಯಿತು, ಆ ನರಪೇತಲ ಒಂದು ದಿನ ಇದ್ದಕ್ಕಿದ್ದಂತೆ ರಕ್ತ ಕಾರುತ್ತಾ ಸತ್ತ. ಅವನ ಅಂತಿಮ ಕ್ರಿಯೆಗಳನ್ನು ನಾವೇ ನಡೆಸಿದೆವು. ಮುಂದೆ ಮೂರೇ ತಿಂಗಳಲ್ಲಿ ಎಲ್ಲರ ಮನ ಒಲಿಸಿ ಒಟ್ಟಾಗಿ ಅಲ್ಲಿಂದ ಮುಂಬೈಗೆ ಬಂದೆವು.

ಅಲ್ಲಿನ ಪ್ರಖ್ಯಾತ ಕೆಂಪು ದೀಪದ ಏರಿಯಾದಲ್ಲಿ ಒಂದು ಬಾಡಿಗೆ ಮನೆ ಹಿಡಿದು ನಮ್ಮ ವೃತ್ತಿ ಆರಂಭಿಸಿದೆವು. ನನ್ನ ಅನುಭವ, ಚಾಕಚಕ್ಯತೆ, ಮೃದುತ್ವದಿಂದ ವ್ಯವಹಾರ ಚೆನ್ನಾಗಿ ನಡೆಯಿತು. ನಮ್ಮ ಸಂಖ್ಯೆ 50 ನ್ನೂ ದಾಟಿತು.

ಈಗ ನನ್ನ ವಯಸ್ಸು 38 ,ಮುಂಬೈ ಕೆಂಪು ದೀಪದ ಪ್ರಖ್ಯಾತ ಘರ್ ವಾಲಿ ನಳಿನ ಮೇಡಮ್ ನಾನೇ. ನನಗೆ ಕಾರಿದೆ, ಬಂಗಲೆಯಿದೆ, ಆಳು ಕಾಳು ಇದ್ದಾರೆ. ರೌಡಿ, ಪೋಲೀಸ್, ರಾಜಕಾರಣಿಗಳ ಲಿಂಕ್‌ ಇದೆ. ನಾನು ಹುಟ್ಟಿದ ಊರಿನಲ್ಲಿ ದೊಡ್ಡ ಹೆಸರಿದೆ. ಅಲ್ಲಿ ನಾನೇ ಮುಂದೆ ನಿಂತು ಹಣ ಖರ್ಚು ಮಾಡಿ ಯಲ್ಲಮ್ಮನ ದೇವಸ್ಥಾನ ಕಟ್ಟಿಸಿದ್ದೇನೆ. ಊರಿನ ಜನ ಕಳೆದ ಬೇಸಿಗೆಯಲ್ಲಿ ನನ್ನನ್ನು ಸನ್ಮಾನಿಸಿದರು ಕೂಡ.

ನನಗೆ ಕೆಂಪು ದೀಪದ ಜೀವನ ಶ್ಯೆಲಿಯ ಬಗ್ಗೆ ನಿಮಗೆ ಹೇಳಬೇಕೆನಿಸುತ್ತದೆ. ಆದರೆ ಈ ಮಹಾನ್ ಸುಸಂಸ್ಕೃತ ದೇಶದಲ್ಲಿ ಹೆಣ್ಣು ಪೂಜನೀಯಳು, ಮಾತಾ ಸ್ವರೂಪಿಯೂ ಆಗಿರುವುದರಿಂದ ಮತ್ತು ಹೆಣ್ಣಿನ ಅಂಗಗಳು ಅಶ್ಲೀಲ, ಅಸಭ್ಯ , ಅಸಹ್ಯ ಎಂದು ಭಾವಿಸಿರುವುದರಿಂದಲೂ ನಿಮಗೆ, ನಿಮ್ಮ ಆತ್ಮವಂಚಕ ಮನಸ್ಸುಗಳಿಗೆ ಮುಜುಗರವಾಗದಿರಲೆಂದು ನಾನಿಲ್ಲಿ ಹೇಳುತ್ತಿಲ್ಲ.

ಸೂಳೆ ಕೂಡ ತಾಯಿ, ತಂಗಿ, ಅಕ್ಕ, ಪ್ರೇಯಸಿಯೇ ನೆನಪಿಟ್ಟುಕೊಳ್ಳಿ.ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ಮಹಿಳಾ ಸ್ವಾತಂತ್ರ್ಯದ ಬಗ್ಗೆ, ಮಹಿಳಾ ಸ್ಥಾನಮಾನದ ಬಗ್ಗೆ, ಯಾವುದೋ ಒಂದು ಅತ್ಯಾಚಾರದ ಬಗ್ಗೆ ಚರ್ಚಿಸುವಾಗ ನಕ್ಕು ಸುಮ್ಮನಾಗುತ್ತೇನೆ.

ಆದರೆ ಮನುಷ್ಯರೇ ನೀವು ಮಾತ್ರ ಸುಮ್ಮನಾಗಬೇಡಿ. ಏಳಿ, ಎದ್ದೇಳಿ, ಎಚ್ಚರಗೊಳ್ಳಿ, ನಮ್ಮಂತಹವರಿಗಾಗಿ ಚಿಂತಿಸಿ. ನಿಮ್ಮ ಕ್ಯೆಲಾದ ಏನಾದರೂ ಸಹಾಯ ಮಾಡಿ.

ಹೆಣ್ಣುಗಳ ಕಣ್ಣೀರನ್ನು ಒರೆಸಿ. ಅಲ್ಲಿಯವರೆಗೂ.

ನಿನ್ನೆ 7/1/2022 ಶುಕ್ರವಾರ ಹಾಸನ ನಗರದ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆದ ಒಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಮತಾಂತರ ನಿಷೇಧ ಕಾನೂನಿನ ಬಗ್ಗೆ ಒಂದಷ್ಟು ಚರ್ಚಿಸಲಾಯಿತು.

ರೈಲಿನಲ್ಲಿ ಪ್ರಯಾಣಿಸುವಾಗ ದಾರಿಯುದ್ದಕ್ಕೂ ಸಾಕಷ್ಟು ನವಿಲುಗಳ ವಿವಿಧ ಭಂಗಿಗಳ ದೃಶ್ಯ ಮನಮೋಹಕವಾಗಿತ್ತು........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಸ್ಸುಗಳ ಅಂತರಂಗದ ಚಳವಳಿ.ವಿವೇಕಾನಂದ. ಹೆಚ್.ಕೆ.