ಜಿಲ್ಲಾಧಿಕಾರಿ ಮಹತ್ಬದ ಸಭೆಗೆ ಆಗಮಿಸಿದ್ದ ಮೂರನೇ ವ್ಯಕ್ತಿ ಯಾರು?
ಬೆಳಗಾವಿ: ಅಕ್ರಮವಾಗಿ ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಿದ್ದರೆ ಹಿರಿಯ ಅಧಿಕಾರಿಯಿಂದ ಸಮಗ್ರ ತನಿಖೆ ನಡೆಸಿ ತಪ್ಪು ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ತಿಳಿಸಿದರು.
ಅವರು ಮಂಗಳವಾರ ಖಾಸಗಿ ಮಾರುಕಟ್ಟೆ, ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ವ್ಯಾಪಾರಿಗಳ ಜೊತೆಗೆ ಕರೆಯಲಾದ ಮಹತ್ವದ ಸಭೆಯಲ್ಲಿ ಮಾತನಾಡಿದರು.
ಜೈ ಕಿಸಾನ್ ಹೋಲ್ ಸೇಲ್ ತರಕಾರಿ ಮಾರುಕಟ್ಟೆಗೆ ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ ಎಂದು ವ್ಯಾಪಾರಿಗಳು ಹಾಗೂ ರೈತರು ದೂರು ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ತರಸಿಕೊಂಡು ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ತಿಳಿಸಲಾಗುವುದು ಎಂದರು.
ರೈತ ಮುಖಂಡರಾದ ಸಿದಗೌಡ ಮೋದಗಿ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಬಿಜೆಪಿ ಮುಖಂಡ ರಾಜು ಟೋಪಣ್ಣವರ, ಸುಜೀತ ಮುಳಗುಂದ ಖಾಸಗಿ ಮಾರುಕಟ್ಟೆಯ ಕರಿಂಲಾಲ್ ಬಾಗವಾನ ಮಾತನಾಡಿದರು.
ಸಭೆಯ ಕೊನೆಯಲ್ಲಿ ಮಹತ್ವದ ಸಭೆಯಲ್ಲಿ ಇಬ್ಬರು ರೈತ ಮುಖಂಡರಾದ ಸಿದ್ದಗೌಡ ಮೊದಗಿ, ರವಿ ಪಾಟೀಲ್ ನಡುವೆ ವಾಗ್ವಾದ ನಡೆಯಿತು. ನೀವು ಯಾರ ಪರ ಇಲ್ಲಿಗೆ ಬಂದಿದ್ದೀರಿ ಎಂದು ರೈತ ಮುಖಂಡ ಮೊದಗಿಗೆ ಪ್ರಶ್ನೆ ಮಾಡಿದರು.
ಸಿದ್ದಗೌಡ ಮೊದಗಿ, ರವಿ ಪಾಟೀಲ್ ನಡುವೆ ವಾಗ್ವಾದ ನಡೆಯುತ್ತಿದ್ದಂತೆ, ಪೊಲೀಸರು ಮದ್ಯ ಪ್ರವೇಶದ ನಂತರ ವ್ಯವಸ್ಥೆ ತಿಳಿಗೊಳಿಸಿದರು. ಬಳಿಕ ರೈತ ಮುಖಂಡ ರವಿ ಪಾಟೀಲ್ ನನ್ನು ಪೊಲೀಸರು ಹೊರ ಹಾಕಿದರು. ಜಿಲ್ಲಾಧಿಕಾರಿಗಳು ಕರೆಯಲಾದ ಮಹತ್ವದ ಸಭೆಯಲ್ಲಿ ಬಂದಿದ್ದ ಆ ಮೂರನೇ ವ್ಯಕ್ತಿ ಯಾರು ಎಂಬುದು ಸಭೆಯ ಬಳಿಕ ಚರ್ಚೆಗೆ ಗ್ರಾಸವಾಗಿತ್ತು.