ನಿವೃತ್ತ ಅದಿಕಾರಿಯನ್ನು ಸನ್ಮಾನಿಸಿದ ಮಂಗೆನಕೋಪ್ಪ ಗ್ರಾಮ ಪಂಚಾಯಿತಿ
ಖಾನಾಪೂರ :ತಾಲೂಕಿನ ಮಂಗೆನಕೋಪ್ಪ ಗ್ರಾಮದಲ್ಲಿ ನಿವೃತ್ತ ಹಿರಿಯ ಆರೊಗ್ಯ ಸಹಾಯಕಿಯಾದ ಶ್ರೀಮತಿ ಸುಜಾತಾ ವಿಷ್ಣುಭಟ ಸಂಗಮ ಇವರು ತಮ್ಮ ನೌಕರಿಯಿಂದ ನಿವೃತ್ತರಾದ ಪ್ರಯುಕ್ತ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಅದ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಸುನಿಲ ಮಡ್ಡಿಮನಿ ಇವರ ಅದ್ಯಕ್ಷತೆಯಲ್ಲಿ ಸತ್ಕಾರ ಸಮಾರಂಭ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀ ಶಿವಾನಂದ ಚಲವಾದಿ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ M V ಸಿವಸಿಂಪಗಿ ಶ್ರೀ L S ವನ್ನೂರ ಶ್ರೀ J M ಎಡೋಗಿ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರು ಹಾಜರಿದ್ದರು.