Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನನ್ನ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ‌ನಿರಂತರ ಎಂದ ಶಾಸಕಿ ಲಕ್ಷ್ಮೀ

localview news

ಬೆಳಗಾವಿ:ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸರಣಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಚಾಲನೆ ನೀಡಿದರು. ತನ್ಮೂಲಕ ಕ್ಷೇತ್ರದ ಅಭಿವೃದ್ಧಿ ನಿರಂತರ ಎನ್ನುವ ಸಂದೇಶ ಸಾರಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಶಿಂಧೋಳ್ಳಿ ಕ್ರಾಸ್ ನಿಂದ ಭರತೇಶ್ ಶಿಕ್ಷಣ ಸಂಸ್ಥೆಯವರೆಗಿನ ರಸ್ತೆಯ ಡಾಂಬರಿಕರಣದ ಸಲುವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 55 ಲಕ್ಷ ರೂ,ಗಳ ವೆಚ್ಚದಲ್ಲಿ ಭೂಮಿ ಪೂಜೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೇರವೇರಿಸಿದರು.

ಅಭಿವೃದ್ಧಿ ಮರೀಚಿಕೆಯಾಗಿದ್ದ ಗ್ರಾಮೀಣ ಕ್ಷೇತ್ರದಲ್ಲಿ ನಾನು ಶಾಸಕಿಯಾದ ನಂತರ ಸಾವಿರಾರು ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳನ್ನು ತಂದಿದ್ದೇನೆ. ಆ ನಂತರವೂ ಕೆಲವು ಕಾಮಗಾರಿಗಳಿಗೆ ತಡೆಯೊಡ್ಡುವ ಕೆಲಸ ನಡೆದಿತ್ತು. ಆದರೆ ಅಡೆತಡೆಗಳನ್ನೆಲ್ಲ ನಿವಾರಿಸಿ ಕೆಲಸ ಮಾಡಿಸುತ್ತಿದ್ದೇನೆ. ಜನರ ಸಹಕಾರದಿಂದಾಗಿ ಕ್ಷೇತ್ರ ಅಭಿವೃದ್ಧಿಯತ್ತ ಮುನ್ನಡೆದಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಗ್ರಾಮೀಣ ಕ್ಷೇತ್ರವನ್ನು ಮಾದರಿ ಮಾಡುವುದು ನ್ನ ಕನಸು. ಹಾಗಾಗಿ ಪ್ರವಾಹ, ಕೊರೋನಾ ಸೇರಿದಂತೆ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶಿರ್ವಾದ ಮುಂದಿನ ದಿನಗಳಲ್ಲಿ ಸಹ ಹೀಗಿಯೇ ಇರಲಿ. ನಾವು-ನೀವೆಲ್ಲ ಸೇರಿ ಕನಸು ನನಸು ಮಾಡೋಣ. ಯಾವುದಕ್ಕೂ ಅಂಜುವುದು ಬೇಡ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಮಾಜಿ‌ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ನಾಗೇಶ ಪತ್ತಾರ, ಸುರೇಶಗೌಡ ಪಾಟೀಲ, ನಿಲಜಿ ಹಾಗೂ ಮುತಗಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.

ಕರ್ನಾಟಕ ‌ನೀರಾವರಿ ನಿಗಮದ ವತಿಯಿಂದ 2.52 ಕೋಟಿ ರೂ,ಗಳ ವೆಚ್ಚದಲ್ಲಿ ಶಿಂಧೋಳ್ಳಿ ಆಲಾರವಾಡ ಮುಖ್ಯ ರಸ್ತೆಯಿಂದ ಶಗನಮಟ್ಟಿ ಕ್ರಾಸ್ ವರೆಗಿನ ರಸ್ತೆಯ ಡಾಂಬರಿಕರಣ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಮಾಜಿ‌ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ನಾಗೇಶ ಪತ್ತಾರ, ಸುರೇಶಗೌಡ ಪಾಟೀಲ, ಗುತ್ತಿಗೆದಾರರಾದ ಎ. ಎಲ್. ದಂಡಿನ್, ನಿಲಜಿ ಹಾಗೂ ಮುತಗಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.

ಮಾವಿನಕಟ್ಟಿಯಲ್ಲಿ ಮಾವಿನಕಟ್ಟಿ ಗ್ರಾಮದಿಂದ ಶಿಗಿಮಾರ್ಗದವರೆಗಿನ ರಸ್ತೆಯ ಡಾಂಬರಿಕರಣ ಕಾಮಗಾರಿಗಳಿಗೆ ಕರ್ನಾಟಕ ‌ನೀರಾವರಿ ನಿಗಮದ ವತಿಯಿಂದ 1.3 ಕೋಟಿ ರೂ,ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ಲಕ್ಷ್ಮಿ ಹೆಬ್ಬಾಳಕರ್ ನೆರವೇಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಮಾಜಿ‌ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ನಾಗೇಶ ಪತ್ತಾರ, ಸುರೇಶಗೌಡ ಪಾಟೀಲ, ಗುತ್ತಿಗೆದಾರರಾದ ಎ. ಎಲ್. ದಂಡಿನ್, ಗ್ರಾಮ ಸರ್ವಸದಸ್ಯರು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.

ಲೋಕೋಪಯೋಗಿ ಇಲಾಖೆಯಿಂದ 55 ಲಕ್ಷ ರೂ. ವೆಚ್ಚದಲ್ಲಿ ಹೊನ್ನಿಹಾಳ ಗ್ರಾಮದಿಂದ ಮಾವಿನಕಟ್ಟಿ ಗ್ರಾಮದವರೆಗಿನ ರಸ್ತೆ ದುರಸ್ತಿಯ ಕಾಮಗಾರಿಗಳಿಗೆ ಸ್ಥಳೀಯ ಮುಖಂಡರು ಚಾಲನೆ ನೀಡಿದರು.