Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಕೇಂಡ್ ಲಾಕ್ ಕ್ಯಾನ್ಸಲ್.. ನೈಟ್‌ ಕರ್ಪ್ಯೂ ಕಂಟಿನ್ಯೂವ್

localview news

ಬೆಂಗಳೂರು : ರಾಜ್ಯದ ಜನರ ವಿರೋಧ, ವಿಪಕ್ಷಗಳ ಒತ್ತಡ, ಸ್ವಪಕ್ಷದವರ ಆಗ್ರಹದಿಂದ ಸರಕಾರ ಕೊನೆಗೂ ವಿಕೇಂಡ್ ಲಾಕ್ ಡೌನ್ ರದ್ದು ಮಾಡಿ, ರಾತ್ರಿ ಕರ್ಪ್ಯೂ ಜಾರಿಗೊಳಿಸಿ ನಿರ್ಧಾರ ಪ್ರಕಟಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯ ನಂತರ ಕಂದಾಯ ಸಚಿವ ಆರ್.ಅಶೋಕ ಮಾಧ್ಯಮಗಳ ಸರಕಾರದ ನಿರ್ಧಾರ ಪ್ರಕಟಿಸಿದರು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇದೆ. ಆದ್ದರಿಂದ ತಜ್ಞರ ಎಲ್ಲ ಸಲಹೆಗಳನ್ನು ಪಡೆದುಕೊಂಡ ಮುಖ್ಯಮಂತ್ರಿಗಳು ವಿಕೇಂಡ್ ಕರ್ಫ್ಯೂ ತೆರವುಗೊಳಿಸುವ ನಿರ್ಧಾರ ಪ್ರಟಿಸಿದ್ದಾರೆ.

ಈಗಾಗಲೇ ರಾತ್ರಿ ಕರ್ಫ್ಯೂವನ್ನು ಎಂದಿನಂತೆ ಮುಂದುವರೆಸಲಾಗಿದ್ದು, ಜನರು ಸರಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕೆಂದು ಇಲ್ಲದಿದ್ದರೇ ಮತ್ತೇ ವಿಕೇಂಡ್ ಲಾಕ್ ಡೌನ್ ಮಾಡುವ ಅನಿವಾರ್ಯತೆ ಬರುತ್ತದೆ ಎಂದರು.