Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮತ್ತಷ್ಟು ಅನುದಾನ : ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ವಿವಿಧ ಇಲಾಖೆಗಳಿಂದ ಇನ್ನಷ್ಟು ಯೋಜನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪರ್ವವೇ ನಡೆಯಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

ಮಾಸ್ತಿನಗರ ಹಿಂಡಲಗಾ ಕಾಲೋನಿಯಲ್ಲಿ ಎಸ್.ಸಿ.ಪಿ ಅನುದಾನದಲ್ಲಿ ಸುಮಾರು 20 ಲಕ್ಷ ರೂ,ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಹಾಗೂ ಡ್ರೈನೇಜ್ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾನು ಶಾಸಕಿಯಾದ ನಂತರ ಯಾವ ಯಾವ ಇಲಾಖೆಯಿಂದ ಸಾಧ್ಯವೋ ಆ ಎಲ್ಲ ಇಲಾಖೆಗಳಿಂದ ಹಣ ತಂದಿದ್ದೇನೆ. ನನಗೆ ಅಭಿವೃದ್ಧಿ ಮತ್ತು ಕ್ಷೇತ್ರದ ಜನರ ಯೋಗಕ್ಷೇಮ ನೋಡುವುದನ್ನು ಬಿಟ್ಟು ಬೇರೇನೂ ಕೆಲಸ ಇಲ್ಲ. ಇದರಲ್ಲೇ 24 ಗಂಟೆ, 365 ದಿನ ತೊಡಗಿಕೊಂಡಿದ್ದೇನೆ ಎಂದು ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಯುವರಾಜ ಕದಂ, ರಾಮಚಂದ್ರ ಕುರೇಮನಿಕರ್, ಹೇಮಂತ ಹಿತ್ತಲಮನಿ, ಅಶೋಕ ಕಾಂಬಳೆ, ರಾಹುಲ್ ಉರನಕರ್ ಕಾರ್ಯಕರ್ತರು ಉಪಸ್ಥಿತರಿದ್ದರು.