Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪೌಜೀಯಾ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ

localview news

ಕೊಪ್ಪಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕರು ಅಧಿಕಾರಿಗಳು ಹಾಗೂ ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಪೌಜೀಯಾ ತರುನ್ನಮ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿರಿವುದಕ್ಕೆ ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಅವರ ಕಚೇರಿಯಲ್ಲಿ ಅಭಿನಂದಿಸಿದರು.

ಜಿಲ್ಲಾ ಪಂಚಾಯತ್ ಸಿಇಒ ಅವರು ಮತದಾರರ ಜಾಗೃತಿಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರ ಪ್ರಯುಕ್ತ ರಾಜ್ಯ ಮಟ್ಟದ ಸ್ವೀಪ್ ಸಮಿತಿಯು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ,ರಾಜ್ಯ ಮಟ್ಟದ ಉತ್ತಮ ಕಾರ್ಯ ನಿರ್ವಹಣೆಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಜಿಲ್ಲೆಯ ಮತದಾರರ ನೋಂದಣಿ ಹಾಗೂ ಮತದಾನವಾಗುವುದಕ್ಕೆ ಕಾರಣವಾಗಿದ್ದರು.ಅನೇಕ ರೀತಿಯ ಹೊಸ ಹೊಸ ವಿಧಾನಗಳನ್ನು ಅಳವಡಿಸಿ ಜಾಗೃತಿ ಮೂಡಿಸಿದ ಪ್ರಯುಕ್ತ ಪ್ರಶಸ್ತಿ ಲಭಿಸಿದೆ.

ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪೌಜೀಯಾ ತರುನ್ನಮ್ ಮಾತನಾಡಿ,ಎಲ್ಲರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ನನ್ನ ಜೊತೆಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ನೌಕರರಿಗೆ ಪ್ರಶಸ್ತಿ ಲಭಿಸಿದಂತೆ ಮುಂದೆಯೂ ಕೂಡಾ ಇದೇ ರೀತಿಯಲ್ಲಿ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.

ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ನಿಮಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.ಇದೇ ರೀತಿಯಲ್ಲಿ ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಲಿ ಎಂದು ಹೇಳಿದರು.

ಈ ಸಮಯದಲ್ಲಿ ಐ.ಎ.ಎಸ್.ಪ್ರಬೋಷನರಿ ಅಧಿಕಾರಿಗಳಾದ ಹೇಮಂತಕುಮಾರ,ಜಿಲ್ಲಾ ಪಂಚಾಯತ್ ಸಿಬ್ಬಂದಿ ಶ್ರೀನಿವಾಸ, ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಕಾಶಿನಾಥ ಸಿರಿಗೇರಿ,ಹನುಮಂತಪ್ಪ ಕುರಿ,ಶರಣಪ್ಪ ರಡ್ಡೆರ,ಮಲ್ಲಪ್ಪ ಗುಡ್ಡದನ್ನವರ,ಹುಲುಗಪ್ಪ ಭಜಂತ್ರಿ,ಗುರುಸ್ವಾಮಿ.ಆರ್.,ಶಿಕ್ಷಕರಾದ ನಾಗರಾಜ ಕಾತರಕಿ ಮುಂತಾದವರು ಹಾಜರಿದ್ದರು.