Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಿಎಂಗೆ ಕ್ಯಾಬಿನೆಟ್ ಮೇಲೆ ಕಂಟ್ರೋಲ್‌ ಇಲ್ಲ: ಶಾಸಕ‌ ಸತೀಶ

localview news

ಬೆಳಗಾವಿ :ಸಿಎಂ ಬೋಮ್ಮಾಯಿ ಸರ್ಕಾರಕ್ಕೆ ಆರು ತಿಂಗಳ ಪೂರೈಸಿದ ಹಿನ್ನೆಲೆ ಸಿಎಂ ಬೋಮ್ಮಾಯಿ ಅವರಿಗೆ ಅವರ ಕ್ಯಾಬಿನೆಟ್ ಮೇಲೆ ಕಂಟ್ರೋಲ್ ಇಲ್ಲ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಬಿಜೆಪಿ ಮಹಾನಗರ ಅಧ್ಯಕ್ಷ ಅಶ್ಲೀಲ ಪೋಟೋ ಪೋಸ್ಟ್ ವಿಚಾರ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೀಗೆ ಮಾಡಿದ್ದು ತಪ್ಪು. ಡಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳಬೇಕು.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತ ಬರಲಿದೆ.ಗೋವಾದಲ್ಲಿ ಯಾರು ಕನ್ನಡಿಗರು ಕೂಡ ನಮ್ಮ ಪಕ್ಷದಿಂದ ಟಿಕೇಟ್ ಕೇಳಿಲ್ಲ.

ರಮೇಶ್ ಬಾಲಚಂದ್ರ ಜಾರಕಿಹೊಳಿ ಸಹೋದರ ವಿಚಾರ. ಅವರ ಪಕ್ಷ ವಿಚಾರದ ವಿಷಯ ನಾವೇನ್ ಹೇಳೋದಕ್ಕೆ ಆಗಲ್ಲ.

ಬಿಜೆಪಿ ನಾಯಕರು ಕಾಂಗ್ರೆಸ್ ದತ್ತ ಒಲವು ವಿಚಾರ. ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಇಲ್ಲ,ಬೆಂಗಳೂರು ಹಂತದಲ್ಲಿ ನಡೆದಿದೆ.ಈ ಬಜೆಟ್ ಅಲ್ಲ ಮುಂದಿನ ಬಜೆಟ್ ಬಳಿಕ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆಗಲಿದೆ. ಮುಂದಿನ ಬಜೆಟ್ ನಂತರ ಕಾಂಗ್ರೇಸ್ ಲೆಕ್ಕಾಚಾರ ಶುರುವಾಗುತ್ತೆ.

ಯಾರು ಬರ್ತಾರೆ ಯಾರಿಲ್ಲ ರಮೇಶ್ ಜಾರಕಿಹೊಳಿ ಕೇಳಬೇಕು. ಬೆಳಗಾವಿಯಲ್ಲಿ ಮುಂದಿನ ಚುನಾವಣೆಯಲ್ಲಿ ಹತ್ತರಿಂದ ಹನ್ನೆರಡು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದರು‌.

ಸಚಿವರು, ಶಾಸಕರು ಏನ್ ಏನೋ ಮಾತಾಡ್ತಿದ್ದಾರೆ.ಸಿಎಂ ಅಂದ್ರೆ ಅವರ ಕೈಯಲ್ಲಿ ಎಲ್ಲವೂ ಕಂಟ್ರೋಲ್ ಅಲ್ಲಿ ಇರಬೇಕು.ಸಿಎಂಗೆ ತಮ್ಮ ಸಚಿವರು, ಶಾಸಕರ ಮೇಲೆ ಕಂಟ್ರೋಲ್ ಇಲ್ಲ ಎಂದರು.