ಮೋದಿ ಲೆಕ್ಕ 2022
ದೆಹಲಿ :ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂ. ಬಜೆಟ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.. ದೇಶದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಡಿಜಿಟಲ್ ಕರೆನ್ಸಿ ಕುರಿತು ಕೇಂದ್ರ ಗಮನಹರಿಸಿದ್ದು, ಆರ್ ಬಿ ಐ ನಿಂದ ಹೊಸ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಿದೆ. ಇನ್ನು ಕ್ರಿಪ್ಟೋ ಕರೆನ್ಸಿಯನ್ನು ತೆರಿಗೆ ಅಡಿಯಲ್ಲಿ ತರಲಾಗಿದೆ. ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರವು ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗಿದೆ.
ರಾಜ್ಯಗಳಿಗೆ 1ಲಕ್ಷ ಕೋಟಿ ಬಡ್ಡಿರಹಿತ ಸಾಲ ಘೋಷಣೆ ಮಾಡಲಾಗಿದೆ. ಇದು ಕೇಂದ್ರದ ಯೋಜನೆಗಳಿಗೆ ಸಾಲದ ರೂಪದಲ್ಲಿ ರಾಜ್ಯಗಳಿಗೆ ಪಾಲು ಹಂಚಲಾಗುತ್ತದೆ. ಇನ್ನು ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷ ಇದ್ದ ಅದೇ ತೆರಿಗೆಯನ್ನು ಮುಂದುವರಿಸಲಾಗಿದೆ.
ಇನ್ನು ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ 18 ರಿಂದ 15ಕ್ಕೆ ಇಳಿಕೆ ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಿದೆ. ಸಹಕಾರಿ ಹೆಚ್ಚುವರಿ ಶುಲ್ಕವನ್ನು 12 ಪ್ರತಿಶತದಿಂದ 7 ಪ್ರತಿಶತಕ್ಕೆ ಇಳಿಸಲಾಗುತ್ತದೆ.ಪಂಚ ರಾಜ್ಯ ಚುನಾವಣೆಯಿಂದ 5 ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇತ್ತು. ಆದರೆ ಯಾವುದೇ ಪೊಳ್ಳು ಭರವಸೆಗಳನ್ನು ನೀಡಿದೆ ಪ್ರಾಯೋಗಿಕವಾಗಿ ಬಜೆಟ್ ಮಂಡಿಸಲಾಗಿದೆ.
ಕೇಂದ್ರದ ಬಜೆಟ್ ಗೆ ಬಿಜೆಪಿ ನಾಯಕರು ಸ್ವಾಗತಿಸಿದರೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಈ ಬಜೆಟ್ ನಲ್ಲಿ ಕೆಲ ವಸ್ತುಗಳು ದುಬಾರಿಯಾಗಿದ್ದು ಇನ್ನೂ ಕೆಲ ವಸ್ತುಗಳನ್ನು ಇಳಿಸಲಾಗಿದೆ.