ರಮೇಶ ಜಾರಕಿಹೊಳಿ ಜೊತೆ ಊಟಾ ಮಾಡಿದ್ರೆ ತಪ್ಪಾ: ಶಾಸಕ ಯತ್ನಾಳ ಪ್ರಶ್ನೆ
ಬೆಳಗಾವಿ : ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಜತೆ ಊಟ ಮಾಡಿದ್ದೇನೆ. ಬೇರೆ ಪಕ್ಷ ಕಟ್ಟುವ ಮನಸ್ಸು ನಮಗೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಗಾಂಧಿ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಯುಗಾದಿಗೆ ಬದಲಾವಣೆಯಾಗುವುದು ಖಚಿತ. ಹೊಸ ನಾಯಕರನ್ನು ಬೆಳೆಸುವ ಅಗತ್ಯ ಇದೆ. ಆದರೆ ಹೈ ಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಆದಷ್ಟು ಬೇಗ ಸಚಿವ ಸಂಪುಟ ವಿಸ್ತರ್ಣೆ ಮಾಡಬೇಕೆಂದರು.
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ದೊರಕಬೇಕೆಂದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ.
ಸಿಎಂ ಬೆಳಗಾವಿ ಅಧಿವೇಶನದಲ್ಲಿಯೇ ಹೇಳಿದ್ರು. ಬಜೆಟ್ ಮಂಡಿಸುವ ಮುನ್ನವೆ ಮೀಸಲಾತಿ ಕೊಡುತ್ತೇವೆ ಎಂದು ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.