Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಗೋವಾ ಚುನಾವಣಾ ಪ್ರಚಾರದಲ್ಲಿ ಮಿಂಚದ ಶಾಸಕ ಅನಿಲ ಬೆನಕೆ

localview news

ಬೆಳಗಾವಿ: ಗೋವಾ ರಾಜ್ಯದ ಕರ್ನಾಟಕದ ಬಿಜೆಪಿ ಶಾಸಕರು ಭರ್ಜರಿ ಮಿಂಚುತ್ತಿದ್ದಾರೆ.‌ ಸಾವರ್ಡೆ ಮತ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಶಾಸಕ ಅನಿಲ ಬೆನಕೆ ಅವರು ಸಾವರರ್ಡೇ ಮತ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಗಣೇಶ ಗಾಂವಕರ ಅವರ ಪರವಾಗಿ ಕೊಲೇಮ ಎಂಬ ಪ್ರದೇಶದಲ್ಲಿ ಮಿಂಚಿನ ಪ್ರಚಾರ ನಡೆಸಿದ್ದಾರೆ.‌

ಗೋವಾದ ರಾಜ್ಯದಲ್ಲಿ ಸದ್ಯ ಆಡಳಿತ ಪಕ್ಷವಾಗಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನಾನಾ ಕಸರತ್ತು ನಡೆಸುತ್ತಿದೆ.‌ಗೋವಾದಲ್ಲಿ ಮರಾಠಾ ಹಾಗೂ ಕನ್ನಡಿಗರ ಮತ ಓಲೈಕೆಗಾಗಿ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆಯವರು ಚುನಾವಣೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಅಭ್ಯರ್ಥಿ ಗಣೇಶ ಗಾಂವಕರ ಅವರಿವೆ ಮಾರ್ಗದರ್ಶನ ನೀಡಿದರು.

ಈ ವೇಳೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸಂಜಯ್‌ ಬೆಳಗಾವಕರ, ಸಹ ಪ್ರಭಾರಿಗಳಾದ ಪಾಂಡುರಂಗ ದಾಮಣೇಕರ, ಈರಯ್ಯಾ ಖೋತ ಹಾಗೂ ಪ್ರಮುಖರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅನಿಲ ಬೆನೆಕ ಅವರಿಗೆ ಸಾಥ ನೀಡಿದರು