ನನ್ನವರಿಗಾಗಿ ಮೂರನೇ ಎಪಿಎಂಸಿ ನಿರ್ಮಾಣ: ಶಾಸಕ ಸತೀಶ
ಬೆಳಗಾವಿ : ಬೆಳಗಾವಿ ಎಪಿಎಂಸಿಯಲ್ಲಿ ಮಳಿಗೆ ಪಡೆದವರು ನಮ್ಮನ್ನು ನಂಬಿ ಪಡೆದಿದ್ದಾರೆ. ಅವರ ರಕ್ಷಣೆ ಮಾಡಲು ಮೂರನೇ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಅವರು ಶುಕ್ರವಾರದಂದು ಪತ್ರಕರ್ತರರೊಂದಿಗೆ ಮಾತನಾಡಿದರು. ಬೆಳಗಾವಿ ಎಪಿಎಂಸಿ ಆವರಣದಲ್ಲಿ ಮಳಿಗೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಅಲ್ಲಿನ ವರ್ತಕರು ನಮ್ಮನ್ನು ನಂಬಿ ಹಣ ಹೂಡಿಕೆ ಮಾಡಿದ್ದಾರೆ.
ಪತ್ರ ಬರೆದು ದೊಡ್ಡದಾಗಿ ಅನಧಿಕೃತವಾಗಿದೆ ಎಂದು ಪತ್ರ ಬರೆದು ಜ.2 ರಂದು ಅವರು ಬಂದು ಅದಕ್ಕೆ ಭೇಟಿ ನೀಡಿದರೂ ಅದು ಈಗ ಅವರಿಗೆ ಖಾಸಗಿ ಮಾರುಕಟ್ಟೆ ಓಕೆ ಆಗಿದೆ ಎಂದು ಪರೋಕ್ಷವಾಗಿ ಬಿಜೆಪಿ ಸ್ಥಳೀಯ ಶಾಸಕರ ಮೇಲೆ ಲೇವಡಿ ಮಾಡಿದರು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೆಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಹೋಗುವುದು ಸರಿಯಲ್ಲ. ಆ ರೀತಿ ಆಗಬಾರದು. ಅಲ್ಲಿನ ಧರ್ಮದ ವ್ಯವಸ್ಥೆ ಆ ರೀತಿ ಮಾಡುತ್ತವೆ ಎಂದರು.