ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡುವಂತೆ ಶ್ರೀರಾಮ ಸೇನಾ ಒತ್ತಾಯ
ಬೆಳಗಾವಿ: ದೇವಸ್ಥಾನ ಮಠ, ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡೂ ವರ್ಷದಿಂದ ಮಠ, ಮಂದಿರದಲ್ಲಿ ಜಾತ್ರಾ ಮಹೋತ್ಸವಕ್ಕೆ ಅವಕಾಶ ಇರಲಿಲ್ಲ. ಆದರೆ ಈ ವರ್ಷ ಕೊರೊನಾ ಎಲ್ಲ ನಿರ್ದೇಶನಗಳನ್ನು ಹಿಂಪಡೆದಿದೆ. ಆದರೆ ದೇವಸ್ಥಾನ, ಮಠ ಜಾತ್ರೆಗಳಿಗೆ ಅನುಮತಿ ನೀಡದೆ ಇರುವುದು ದುರ್ದೈವದ ಸಂಗತಿ ಎಂದು ಮನವಿಯಲ್ಲಿ ದೂರಿದ್ದಾರೆ.
ಕೊರೊನಾ ನಿಯಮಾವಳಿ ಸಡಿಲಗೊಂಡಿರುವುದರಿಂದ ಹಿಂದೂ ಧರ್ಮದ ಜಾತ್ರಾ ಮಹೋತ್ಸವಗಳಿಗೆ ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ, ರವಿ ಕೋಕಿತಕರ, ವಿನಯ ಅಂಗ್ರೋಳಿ ಸೇರಿದಂತೆ ಮೊದಲಾದವರು ಹಾಜರಿದ್ದರು.