Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಥಣಿಯಲ್ಲಿ ರಸ್ತೆಯಲ್ಲಿಯೂ ಹಣ ಹೊಡೆಯುವ ಖದೀಮರು: ಆರೋಪ

localview news

ಅಥಣಿ : ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾಮ‌ ಪಂಚಾಯತಿ ವ್ಯಾಪ್ತಿಯ ಅಬ್ಬಿಹಾಳ ರಸ್ತೆಗೆ ಹೊಂದಿಕೊಂಡ ಹಳೆ ಶಿವನೂರ ರಸ್ತೆಗೆ ಸುಮಾರು 09 ಲಕ್ಷ ರೂ ಅನುದಾನದಲ್ಲಿ ರಸ್ತೆಗೆ ಘರುಸು (ಮುರುಮು) ಹಾಕುವ ಕಾಮಗಾರಿ‌ ಕಳಪೆಯಾಗಿದೆ, ಈ ರಸ್ತೆ ನಿರ್ಮಾಣಕ್ಕಾಗಿ ಕಾರ್ಮಿಕರನ್ನು‌ ಬಳಸದೆ ಜೆಸಿಬಿ ಬಳಸಲಾಗಿದೆ, ಸಮರ್ಪಕ ಘರುಸು ಹಾಕಿಲ್ಲ, ಅದರ ಮೇಲೆ ನೀರು ಹಾಕಿ ರೋಲರ್ ಹಾಯಿಸಿ ಮಾಡಬೇಕಾದ ಕೆಲಸವನ್ನು ಗ್ರಾ.ಪಂ‌ ಉಪಾಧ್ಯಕ್ಷ ಪುಟ್ಟು ಶಿಂಧೆ ಎಂಬುವರು ಸರಿಯಾಗಿ ಮಾಡದೆ ಬೇಕಾಬಿಟ್ಟಿಯಾಗಿ ಮಾಡಿ ಬಿಲ್ಲು ತೆಗೆಯುವ ಹುನ್ನಾರ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಅಪ್ಪು ಚಮಕೇರಿ ಅವರು ಆರೋಪಿಸಿದರು.

ಅವರು ಸ್ಥಳೀಯ ಪತ್ರಕರ್ತರನ್ನು ಉದ್ದೇಶಿಸಿ ಹದಗೆಟ್ಟ ರಸ್ತೆಯನ್ನು ತೋರಿಸುತ್ತಾ ಮಾತನಾಡುತ್ತಾ ಸಂಕೋನಟ್ಟಿ ಗ್ರಾ.ಪಂ ಉಪಾಧ್ಯಕ್ಷ ಪುಟ್ಟು ಶಿಂಧೆ ಎಂಬುವವರು ತಮ್ಮ ವ್ಯಾಪ್ತಿಯ ಈ ರಸ್ತೆಯನ್ನು ತಾವೆ ಖುದ್ದಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ನಿರ್ಮಾಣ ಕಾರ್ಯ ಮಾಡಿದ್ದಾರೆ, ರಸ್ತೆಯ‌ ನಿಯಮಗಳ ಪ್ರಕಾರ ರಸ್ತೆ ನಿರ್ಮಾಣವಾಗಿಲ್ಲ, ತಮಗೆ ಉಚಿತವಾಗಿ ಸಿಕ್ಕ ಘರುಸು ಹಾಕಿ ಕಳಪೆ‌ ರಸ್ತೆ ನಿರ್ಮಿಸಿ ಬಿಲ್ಲು ತೆಗೆಯುತ್ತಿದ್ದಾರೆ, ಕೆಲವು ಕಡೆ ಘರುಸು ಹಾಕಿ ಕೆಲವು ಕಡೆ ಬಿಡಲಾಗಿದೆ, ಎಸ್ಟಿಮೇಟ್ ಪ್ರಕಾರ ಕೆಲಸ ಮಾಡದೆ ಬೇಕಾಬಿಟ್ಟಿಯಾಗಿ ಮಾಡಿದ್ದಾರೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಅವರ ಬಿಲ್ಲು ತಡೆಹಿಡಿದು, ಸರಿಯಾದ ರಸ್ತೆ ನಿರ್ಮಾಣವಾಗುವಂತೆ ಮಾಡಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ವೇಳೆ ಸ್ಥಳಕ್ಕೆ ಆಗಮಿಸಿ ಅಲ್ಲಿ ನೆರೆದವರ ಜೊತೆ ಮಾತಿನ‌ ಚಕಮಕಿ ನಡೆಸಿ ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷ ಪುಟ್ಟು ಶಿಂಧೆ ಅವರು ನಾನು ರಸ್ತೆ ನಿರ್ಮಾಣ ಕಾರ್ಯಕ್ಕೆ ಯಂತ್ರೋಪಕರಣ ಬಳಸಿದ್ದು ನಿಜ, ಇಲ್ಲಿ ಜನರೆ ಕೆಲಸ ಮಾಡಬೇಕಿತ್ತು ಅದನ್ನು ನಾನು ಮಾಡಿದ್ದೆನೆ, ಅವರೇ ಎನ್.ಆರ್.ಜಿ ಬಿಲ್ಲು ತೆಗೆದು ನನಗೆ ಕೊಡಬೇಕು, ಪಂಚಾಯತಿಯಲ್ಲಿ ಅನುಮೋದನಗೊಂಡ ಈ ಕಾರ್ಯವನ್ನು ಯಾವ ಗುತ್ತಿಗೆದಾರನಿಗೆ ಕೊಡಲು ಬರಲ್ಲ‌ ನಾನೆ ಖುದ್ದಾಗಿ ರಸ್ತೆಯನ್ನು ಮಾಡುತ್ತಿದ್ದೆನೆ ಎಂದು ಹೇಳಿದರು.

ಈ ಕುರಿತು ಗ್ರಾ.ಪಂ ಅಭಿವೃದ್ದಿ ಅಧಿಕಾರಿಯನ್ನು ಸಂಪರ್ಕಿಸಿದಾಗ ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆಯನ್ನು ಕೊಟ್ಟಿಲ್ಲ ಹೇಗೆ ಮಾಡಲಾಗುತ್ತದೆ ಎಂದರು.

ಈ ವೇಳೆ ತುಕಾರಾಮ ಮಾಳಿ, ಮುರುಗೆಪ್ಪ ಮಾಳಿ, ಸದಾಶಿವ ಚಿಮ್ಮಡ, ಅಶೋಕ ನರೋಡೆ, ಸುರೇಶ‌ ನರೋಡೆ, ಸದಾಶಿವ ಚಿಮ್ಮಡ, ಬಸವರಾಜ ನರೋಡೆ, ನಿಂಗಪ್ಪ ಬುರ್ಲಿ, ಗುರುಲಿಂಗ ಬಕಾರಿ, ಹಣಮಂತ ಶಿಂಧೆ, ಧರೆಪ್ಪ ಹೊನ್ನೊಳ್ಳಿ, ಚನ್ನಪ್ಪ ಚಿಮ್ಮಡ, ನವೀನ ನರೋಡೆ, ಸಾಬು ಕಾಂಬಳೆ, ಮುದಕಪ್ಪ ನಿರ್ವಾಣಿ, ಸಿದ್ದಪ್ಪ ನರೋಡೆ, ಮುರುಗೆಪ್ಪ ಲಗಳಿ, ಬಸಪ್ಪ ಲಗಳಿ, ಮಲ್ಲಪ್ಪ ನರೋಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.