Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪಂತ ಬಾಳೆಕುಂದ್ರಿ ಅಭಿವೃದ್ಧಿ ಕಾಮಗಾರಿಗೆ ಮೃಣಾಲ್ ಹೆಬ್ಬಾಳ್ಕರ್ ಚಾಲನೆ.

localview news

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿಯ ರಾಜಮಾರ್ಗ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಚಾಲನೆ ನೀಡಿದರು.

ಈ ರಸ್ತೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 20 ಲಕ್ಷ ರೂ. ಮಂಜೂರಾಗಿದ್ದು, ಭೂಮಿ ಪೂಜೆ ಕೈಗೊಳ್ಳುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದ ಹೊರಗಿದ್ದರೂ ಅಭಿವೃದ್ಧಿ ಕಾಮಗಾರಿ ನಿಲ್ಲಬಾರದೆನ್ನುವ ಕಾರಣದಿಂದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಯ ಹಿರಿಯರಿಂದಲೇ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ.

ತನ್ಮೂಲಕ ಅಭಿವೃದ್ಧಿ ನಿರಂತರ ಎನ್ನುವ ಸಂದೇಶವನ್ನು ಶಾಸಕರು ಸಾರಿದ್ದಾರೆ ಎಂದು ಮೃಣಾಲ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ಕ್ಷೇತ್ರದ ಜನರು ನಮ್ಮ ಇಡೀ ಕುಟುಂಬವನ್ನು ತಮ್ಮದೇ ಕುಟುಂಬ ಎನ್ನುವಂತೆ ನೋಡುತ್ತಿದೆ. ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.

ನಾವೂ ಸಹ ಕ್ಷೇತ್ರದ ಜನರ ಕಷ್ಟ, ಸುಖಗಳಲ್ಲಿ ಸಮಾನವಾಗಿ ಭಾಗಿಯಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಸಹಕಾರವಿರಲಿ ಎಂದು ಅವರು ನವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗುಲಾಬಿ ಕೋಲಕಾರ, ಪಾರ್ವತಿ ತಳವಾರ, ಪಿಡಿಓ ಸುರೇಶ ಬಗಲಿ, ಅಪ್ಸರ್ ಜಮಾದಾರ, ರಸೂಲ್ ಮಕಾನದಾರ, ಮಹಮ್ಮದ್ ಜಮಾದಾರ, ಸುರೇಶ ಕಾಳೋಜಿ, ಹೊನಗೌಡ ಪಾಟೀಲ, ವೀಣಾ ಪಾಟೀಲ, ಶಿವಪ್ಪ, ಅಲ್ತಾಫ್, ಪ್ರೇಮ ಕೋಲಕಾರ ಹಾಗೂ ಮೊದಲಾದವರು ಉಪಸ್ಥಿತರಿದ್ದರು