Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಾದರಿ ಕ್ಷೇತ್ರದತ್ತ ಮತ್ತೊಂದು ಹೆಜ್ಜೆ: ಸರಣಿ ಯೋಜನೆಗಳಿಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ :ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸುವ ಪಣ ತೊಟ್ಟಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಂಗಳವಾರ 3 ಕೋಟಿಗೂ ಹೆಚ್ಚು ಅಂದಾಜು ವೆಚ್ಚದ ಹಲವು ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.

2.65 ಕೋಟಿ ರೂ ಯೋಜನೆ:

ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಗಡಿಭಾಗದಿಂದ ರಾಕಸಕೊಪ್ಪ, ಸುತಗಟ್ಟಿ ರಾಷ್ಟ್ರೀಯ ಹೆದ್ದಾರಿ ನಂಬರ್ ನಾಲ್ಕಕ್ಕೆ ಹೊಂದಿಕೊಳ್ಳುವ ರಸ್ತೆಯು ಅತಿವೃಷ್ಟಿಯಿಂದ ಹಾಳಾಗಿದ್ದು ಅದನ್ನು ಹೊಸದಾಗಿ ನಿರ್ಮಾಣ ಮಾಡುವ ಸಲುವಾಗಿ ರಸ್ತೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.

ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 2.65 ಕೋಟಿ ರೂ,ಗಳು ಮಂಜೂರಾಗಿದ್ದು, ರಸ್ತೆಯನ್ನು ಒಳ್ಳೆಯ ಗುಣಮಟ್ಟದಿಂದ ಮಾಡಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಬ್ಲಾಕ ಅಧ್ಯಕ್ಷ ಯಲ್ಲಪ್ಪ ಡೇಕೋಲ್ಕರ್, ಶಿವಾಜಿ ಬೋಕಡೆ, ಹೇಮಾ ಹಡಗಲ, ಬಾಲಕೃಷ್ಣ ಲೋಹಾರ, ಚಿರಮುರ್ಕರ, ಸುರೇಶ ಕೀಣೆಕರ್, ಮನು ಮೇಳವಕರ್, ಗುತ್ತಿಗೆದಾರರಾದ ಶಶಿಕಿರಣ ಎಸ್, ಮಹೇಶ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಬೆಳಗುಂದಿಯಲ್ಲಿ ರಸ್ತೆ ಸುಧಾರಣೆ:

ಕ್ಷೇತ್ರದ ಬೆಳಗುಂದಿ ಗ್ರಾಮಕ್ಕೆ ಹೋಗುವ ಬೈಪಾಸ್ ರಸ್ತೆಯ ಸುಧಾರಣೆಯ ಸಲುವಾಗಿ ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ 25 ಲಕ್ಷ ರೂ.ಗಳು ಮಂಜೂರಾಗಿದ್ದು, ರಸ್ತೆಯ ಸುಧಾರಣೆಯ ಕಾಮಗಾರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.

ಮಳೆಯಿಂದಾಗಿ ಈ ರಸ್ತೆ ಹಾಳಾಗಿದ್ದು, ಕೆಲವರು ಇದನ್ನೇ ರಾಜಕೀಯಕ್ಕೆ ಬಳಸಲು ಯತ್ನಿಸಿದ್ದರು. ಜನರ ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ ಅವರಿಗೆಲ್ಲ ಅಭಿವೃದ್ಧಿ ಮೂಲಕವೂ ಹೆಬ್ಬಾಳಕರ್ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಬ್ಲಾಕ ಅಧ್ಯಕ್ಷ ಯಲ್ಲಪ್ಪ ಡೇಕೋಲ್ಕರ್, ಶಿವಾಜಿ ಬೋಕಡೆ, ಹೇಮಾ ಹಡಗಲ, ಬಾಲಕೃಷ್ಣ ಲೋಹಾರ, ಚಿರಮುರ್ಕರ, ಸುರೇಶ ಕೀಣೆಕರ್, ಮನು ಮೇಳವಕರ್, ಗುತ್ತಿಗೆದಾರರಾದ ಶಶಿಕಿರಣ ಎಸ್, ಮಹೇಶ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಬೆಳಗುಂದಿ ಗ್ರಾಮದ ಒಳಾಂಗಣ ರಸ್ತೆಗಳ ಅಭಿವೃದ್ಧಿ:

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದ ಒಳಾಂಗಣ ರಸ್ತೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿಯ ನಿಧಿಯ ವತಿಯಿಂದ 10 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು, ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಬ್ಲಾಕ ಅಧ್ಯಕ್ಷ ಯಲ್ಲಪ್ಪ ಡೇಕೋಲ್ಕರ್, ಶಿವಾಜಿ ಬೋಕಡೆ, ಹೇಮಾ ಹಡಗಲ, ಬಾಲಕೃಷ್ಣ ಲೋಹಾರ, ಚಿರಮುರ್ಕರ, ಸುರೇಶ ಕೀಣೆಕರ್, ಮನು ಮೇಳವಕರ್, ಗುತ್ತಿಗೆದಾರರಾದ ಶಶಿಕಿರಣ ಎಸ್, ಮಹೇಶ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಕವಳೆವಾಡಿ ರಸ್ತೆ ಅಭಿವೃದ್ಧಿ:

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕವಳೆವಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 32 ಲಕ್ಷ ರೂ.ಗಳು ಮಂಜೂರಾಗಿದ್ದು, ಸೋಮವಾರ ತಡರಾತ್ರಿ ಕವಳೆವಾಡಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಮ್ಮುಖದಲ್ಲಿ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಯುವರಾಜ ಕದಂ, ಜ್ಯೊತಿಬಾ ಮೋರೆ, ಕಲ್ಲಪ್ಪ ಯಳ್ಳೂರಕರ್, ನಾಮದೇವ ಮೋರೆ, ಯಲ್ಲಪ್ಪ ಸುತಾರ, ಶಿವಾಜಿ ಜಾಧವ್, ಮಾರುತಿ ನಚಿಕೇತ್, ಬಾವುಕಣ್ಣ ಗವಳಾ, ಲಕ್ಷ್ಮೀ ಮೋರೆ, ಸ್ವಾತಿ ಬಾಚಿಕರ್, ಪೂಜಾ ಮೋರೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಯೋಜನೆ:

ಕವಳೆವಾಡಿ ಮತ್ತು ರಣಕುಂಡೆ ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳಲ್ಲಿ ಬೊರವೆಲ್ ಕೊರೆಸುವ ಕೆಲಸವನ್ನು ಕೈಗೆತ್ತಿಕೊಂಡು ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಯುವರಾಜ ಕದಂ, ಜ್ಯೊತಿಬಾ ಮೋರೆ, ಕಲ್ಲಪ್ಪ ಯಳ್ಳೂರಕರ್, ನಾಮದೇವ ಮೋರೆ, ಯಲ್ಲಪ್ಪ ಸುತಾರ, ಶಿವಾಜಿ ಜಾಧವ್, ಮಾರುತಿ ನಚಿಕೇತ್, ಬಾವುಕಣ್ಣ ಗವಳಾ, ಲಕ್ಷ್ಮೀ ಮೋರೆ, ಸ್ವಾತಿ ಬಾಚಿಕರ್, ಪೂಜಾ ಮೋರೆ, ಭರಮಾ ಪಾಟೀಲ, ನಿಂಗಪ್ಪ ಪಾಟೀಲ, ರಾಮು ಪಾಟೀಲ, ಪ್ರಭಾಕರ್ ಪಾಟೀಲ, ಶೀತಲ್ ಪಾಟೀಲ, ಗೌಸಬಿ ತಹಶಿಲ್ದಾರ, ರೇಣುಕಾ ಪಾಟೀಲ, ಲಕ್ಷ್ಮೀ ಪಾಟೀಲ ಹಾಗೂ ಮೊದಲಾದವರು ಉಪಸ್ಥಿತರಿದ್ದರು.