Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಹಿಜಾಬ್ ವಿಚಾರದಲ್ಲಿ ರಾಹುಲ್ ಗಾಂಧಿ ನಮ್ಮ ನಿಲುವು ಹೇಳಿದ್ದಾರೆ: ಡಿಕೆಶಿ

localview news

ಬೆಳಗಾವಿ : ಹಿಜಾಬ್ ವಿಚಾರದಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಅವರು ನಮ್ಮ ನಿಲುವು ಹೇಳಿದ್ದಾರೆ‌ ಎಂದು ಕೆಪಿಸಿಸಿ ಅಧ್ಯಕ್ಷ ‌ಡಿ.ಕೆ.ಶಿವಕುಮಾರ ತಿಳಿಸಿದರು.

ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೇಂದ್ರ ಸರಕಾರದ ಬಜೆಟ್ ಉತ್ತಮವಾಗಿದೆ. ಎಲ್ಲರಿಗೂ ಉದ್ಯೋಗ ಕೊಟ್ಟಿದ್ದಾರೆ, ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಉಳಿಸಲು ಹಾಗೂ ಖಾಸಗಿ ಮಾರುಕಟ್ಟೆ ಬಂದ್ ಮಾಡಲು ರೈತರು ಹೋರಾಟ ನಡೆಸಿದ್ದಾರೆ. ಅವರ ಸಮಸ್ಯೆಯನ್ನು ವಿಧಾನ ಸಭೆಯಲ್ಲಿ ಪ್ರಶ್ನಿಸುವೆ ಎಂದರು.

ಸರಕಾರದ ಎಪಿಎಂಸಿ ಇದ್ದರೂ ಖಾಸಗಿ ಮಾರುಕಟ್ಟೆ ನಿರ್ಮಾಣವಾಗಿದೆ. ಇನ್ನೊಂದು ಮಾರುಕಟ್ಟೆ ಸತೀಶ ಜಾರಕಿಹೊಳಿ ಸ್ಥಾಪನೆ ಮಾಡುವುದು ನನಗೆ ಗೊತ್ತಿಲ್ಲ. ಕೇಳಿ ಹೇಳುವೆ ಎಂದರು. ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಶಾಸಕ ಮಹಾಂತೇಶ ಕೌಜಲಗಿ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡರಾದ ರಾಜು ಸೇಠ್, ಲಕ್ಷ್ಮಣರಾವ್ ಚಿಂಗಳೆ, ವೀರಕುಮಾರ ಪಾಟೀಲ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.