Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸೋಯಾ, ಅವರೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಬೆಳಗಾವಿ: ಡಾ. ಕೋರೆ

localview news

ಬೆಳಗಾವಿ : ಕರ್ನಾಟಕದಲ್ಲಿ ಇತ್ತೀಚನ ವರ್ಷಗಳಲ್ಲಿ ಸೋಯಾ, ಅವರೆ ಕ್ಷೇತ್ರದ ಹೆಚ್ಚಾಗುತ್ತಲಿದ್ದು, ಬೆಳಗಾವಿ ಜಿಲ್ಲೆ ಎರಡನೇ ಪ್ರಮುಖ ಸ್ಥಾನದಲ್ಲಿ ಬಂದಿದೆ ಎಂದು ಕೆಎಲ್‌ಇ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ಇತ್ತೀಚೆಗೆ ಬೆಳಗಾವಿ ಕೆಎಲ್‌ಇ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಹೊಸ ತಳಿಗಳ ಗುಣಮಟ್ಟದ ಸೋಯಾ ಅವರೆ ಬೀಜೋತ್ಪಾದನೆ ಕುರಿತು ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದರು.

ಸೋಯಾ ಅವರೆ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಗುಣಮಟ್ಟದ ಬೀಜದ ಪೂರೈಕೆ ಅತೀ ಮುಖ್ಯವಾಗಿದೆ. ಆದರೆ, ರಾಜ್ಯವೂ ಸೇರಿದಂತೆ ಸೋಯಾ ಅವರೆ ಬೆಳೆಯುವ ಇತರೇ ರಾಜ್ಯಗಳಲ್ಲಿ ಅಧಿಕ ಇಳುವರಿ ನೀಡುವ ಹೊಸ ತಳಿಗಳ ಗುಣಮಟ್ಟದ ಬೀಜದ ಕೊರತೆಯಿರುವುದು. ಈ ದಿಶೆಯಲ್ಲಿ ರೈತರ ಸಮಸ್ಯೆಗಳನ್ನು ಮನದಲ್ಲಿಟ್ಟುಕೊಂಡು ಐಸಿಎಆರ್– ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಹೊಸ ತಳಿಗಳ ಗುಣಮಟ್ಟದ ಸೋಯಾ ಅವರೆ ಬೀಜೋತ್ಪಾದನೆ ಮಾಡಿ, ಕರ್ನಾಟಕ ರಾಜ್ಯದ ರೈತರಿಗೆ ಪೂರೈಕೆ ಮಾಡುವ ಸಲುವಾಗಿ ಭಾರತ ಸರಕಾರದೊಂದಿಗೆ ಪ್ರಮುಖವಾದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಒಡಂಬಡಿಕೆಯಿಂದ್ ಕರ್ನಾಟಕ ರಾಜ್ಯದ ಅದರಲ್ಲೂ ಬೆಳಗಾವಿ ಜಿಲ್ಲೆಯ ಸೋಯಾ ಅವರೆ ಬೆಳೆಯುವ ರೈತ ಸಮುದಾಯಕ್ಕೆ ಸುಧಾರಿತ ಹೊಸ ತಳಿಗಳ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯದ ರೈತರಿಗೂ ಸಹ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದಭದಲ್ಲಿ ಭಾರತ ಸರಕಾರದ ಪರವಾಗಿ ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಉಪ ಆಯುಕ್ತ ಬಿ.ಕೆ ಶ್ರೀವಾಸ್ತವ ಹಾಗೂ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದÀ ಅಧ್ಯಕ್ಷ ಬಿ.ಆರ್.ಪಾಟೀಲ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಐಸಿಎಆರ್‌ನ ಭಾರತೀಯ ಸೋಯಾ ಅವರೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ನೀತಾ ಖಾಂಡೇಕರ ಹಾಗೂ ಪ್ರಧಾನ ವಿಜ್ಞಾನಿ ಡಾ. ಸಂಜಯ ಗುಪ್ತಾ ಹಾಗೂ ಐಸಿಎಆರ್-ಅಟಾರಿ,ವಲಯ-11, ಬೆಂಗಳೂರು ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ಉಪಸ್ಥಿತರಿದ್ದರು.

ಈ ಮಹತ್ವದ ಯೋಜನೆಯ ಅನುಷ್ಠಾನವನ್ನು ಸಸ್ಯ ತಳಿಗಳು ಹಾಗೂ ರೈತರ ಹಕ್ಕುಗಳ ಸಂರಕ್ಷಣೆ ಪ್ರಾಧಿಕಾರ, ನವದೆಹಲಿಯ ಹಿಂದಿನ ಕಾರ್ಯಾಧ್ಯಕ್ಷ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಡಾ.ಆರ್.ಆರ್.ಹಂಚಿನಾಳ ಇವರ ಮಾರ್ಗದರ್ಶನದಲ್ಲಿ ನಡೆಯುವುದು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶ್ರೀದೇವಿ ಬಿ. ಅಂಗಡಿ ಹಾಗೂ ಬೇಸಾಯ ಶಾಸ್ತçದ ವಿಜ್ಞಾನಿ ಜಿ.ಬಿ.ವಿಶ್ವನಾಥ ಇವರು ಕ್ಷೇತ್ರಮಟ್ಟದಲ್ಲಿ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುವರು.

ಈ ಯೋಜನೆ ಅವಧಿಯು ಐದು ವರ್ಷಗಳಾಗಿದ್ದು, ಯೋಜನೆ ಅನುಷ್ಠಾನಕ್ಕೆ ಬಂದ ನಂತರ, ರೈತ ಸಮುದಾಯಕ್ಕೆ ಸೋಯಾ ಅವರೆ ಉತ್ಪಾದನಾ ತಾಂತ್ರಿಕತೆ ಬಗ್ಗೆ ಮಾಹಿತಿ ಕೊಡುವುದಲ್ಲದೇ, ಗುಣಮಟ್ಟದ ಸುಧಾರಿತ ತಳಿಗಳ ಬೃಹತ್ ಬೀಜೋತ್ಪಾದನೆಕೈಗೊಂಡು ರೈತರಿಗೆ ಸಕಾಲಕ್ಕೆ ಒದಗಿಸಲಾಗುವುದು ಹಾಗೂ ಈ ಅವಧಿಯಲ್ಲಿ ತಮಿಳುನಾಡು, ಒರಿಸ್ಸಾ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೂ ಸೋಯಾ ಅವರೆ ಕ್ಷೇತ್ರವು ವಿಸ್ತರಣೆಯಾಗುವುದು.

ಈ ಕಾರ್ಯಕ್ರಮದಲ್ಲಿಐಸಿಎಆರ್‌ನ ಭಾರತೀಯ ಸೋಯಾಅವರೆ ಸಂಶೋಧನಾಸಂಸ್ಥೆ (ಇಂದೋರ್) ಯವರೂ ಸಹ ಸಹ ಪಾಲ್ಗೊಳ್ಳುವರು ಮತ್ತು ಹೊಸತಳಿಗಳು ಬಿಡುಗಡೆಯಾದ ನಂತರ ಒಂದೇ ವರ್ಷದಲ್ಲಿ ಮೂರು ಹಂಗಾಮುಗಳಲ್ಲಿ ಬೀಜೋತ್ಪಾದನೆ ಕೈಗೊಳ್ಳುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಸಹಾಯವಾಗಲಿದೆ ಹಾಗೂ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಆಶಯದಂತೆ ಅನುಷ್ಠಾನಗೊಳಿಸುತ್ತಿರುವ ಆತ್ಮ ನಿರ್ಭರಯೋಜನೆಯಉದ್ದೇಶದಂತೆದೇಶದಲ್ಲಿಈಗಿರುವ ಎಣ್ಣೆಕಾಳುಗಳ ಕೊರತೆಯನ್ನು ನೀಗಿಸಿ ಎಣ್ಣೆಕಾಳುಗಳ ಭದ್ರತೆ ಸಾಧಿಸುವಲ್ಲಿಈ ಯೋಜನೆಯು ಅನುಕೂಲವಾಗಲಿದೆ ಎಂದು ಈ ಕಾರ್ಯಕ್ರಮವನ್ನು ರೂಪಿಸಲು ಸಲಹೆ ನೀಡಿದ ಡಾ. ಪ್ರಭಾಕರ ಬಿ.ಕೋರೆಯುವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.