ಅಥಣಿಗೂ ವ್ಯಾಪಿಸಿದ ಹಿಜಾಬ್, ಕೇಸರಿ ವಿವಾದ
ಅಥಣಿ : ಅಥಣಿ ಪಟ್ಟಣದಲ್ಲಿ ವಿದ್ಯಾರ್ಥಿಗಳಿಂದ ಕೇಸರಿ ಶಾಲು ಪ್ರದರ್ಶನವಾಗಿದೆ, ಸ್ಥಳೀಯ ಶ್ರೀ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಕೇಸರಿ ಶಾಲು ಧರಿಸಿಕೊಂಡು ಬಂದ 10 ಕ್ಕೂ ಅಧಿಕ ವಿದ್ಯಾರ್ಥಿಗಳು.
ಕಳೆದೆರಡು ದಿನದಿಂದ ರಾಜ್ಯದಾದ್ಯಂತ ಹಿಜಾಬ್ ಸದ್ದು ಮಾಡಿದರೆ ಮತ್ತೆ ಈಗ ಕೇಸರಿ ಶಾಲು ಸದ್ದುಮಾಡುತ್ತಿದೆ. ಅಥಣಿಯ ಕಾಲೇಜು ಆವರಣ ವರೆಗೆ ಕೇಸರಿ ಶಾಲು ಹಾಕೊಂಡು ಬಂದ 10 ಕ್ಕೂ ಅಧಿಕ ವಿದ್ಯಾರ್ಥಿಗಳು. ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಬೇಟಿ ಮಾಡಿ ಕಾಲೇಜಿನ ಆಡಳಿತ ಮಂಡಳಿ ಜೊತೆ ಅಧಿಕಾರಿಗಳು ಸಭೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಲು ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.