Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ

localview news

ಬೆಳಗಾವಿ : ಬೆಳಗಾವಿಯ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಇದೇ ಫೆ.20 ರಂದು ಬೆಂಗಳೂರು ಮಹಾನಗರದ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ನಗದು 10 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಇ.ದೇವನಾಥನ್, ಮಾಗಡಿ ಶಾಸಕ ಎ.ಮಂಜುನಾಥ, ಯಲಹಂಕ ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್.ವಿಶ್ವನಾಥ, ಶಿಂಧಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮದನ್ ದೌಲತ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಕಳೆದ ವರ್ಷ ಶ್ರೀಮಠದಿಂದ ಸಂಸ್ಕೃತ ವಾರ್ತೆ ಓದುವರಲ್ಲಿ ಅಗ್ರಗಣ್ಯರಾದ ಫಲದೇವಾನಂದ ಸಾಗರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.