Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಗೆ ಹರಿಯದ ಹಿಜಾಬ್ ವಿವಾದ: ವಿಧ್ಯಾರ್ಥಿಗಳ ಪ್ರತಿಭಟನೆ

localview news

ಬೆಳಗಾವಿ : ಹಿಜಾಬ್ ವಿವಾದ ಸದ್ಯಕ್ಕೆ ಮುಗಿಯುವ ರೀತಿ ಕಾಣುತ್ತಿಲ್ಲ. ವಿಜಯಾ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜುನಲ್ಲಿ ಶನಿವಾರವೂ ಮುಂದುವರೆದಿದ್ದು, ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡೇ ಕ್ಯಾಂಪಸ್ ಬಂದಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಅವರನ್ನು ಹಿಜಾಬ್ ತೆಗೆದು ತರಗತಿಗೆ ಬನ್ನಿ ಎಂದಾ ಹಿಜಾಬ್ ಕುರಿತು ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ನಾವು ಹಿಜಾಬ್ ತೆಗೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಶನಿವಾರವೂ ಹಿಜಾಬ್ ಮತ್ತು ಬುರ್ಖಾ ಧರಿಸಿಕೊಂಡು ಕಾಲೇಜಿಗೆ ಹೋಗುವ ವೇಳೆ ವಿಜಯ ಪ್ಯಾರಾ ಮೆಡಿಕಲ್ ಸೈನ್ಸ್ನ ಆಡಳಿತ ಮಂಡಳಿ ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ಸೂಚನೆ ನೀಡಿದರೂ ಕ್ಯಾರೆ ಎನ್ನದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡೆ ಬಂದರು.