Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಮಗ ಕೊಡುವಂತೆ ಆಗ್ರಹ

localview news

ಅಥಣಿ : ರಾಜ್ಯಾದ್ಯಂತ 30ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಾಳಿ ಸಮಾಜದ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸದಿದ್ದರೆ ಮಾಳಿ ಸಮಾಜ ಸಂಘಟಿತ ಹೋರಾಟದ ಮೂಲಕ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಉತ್ತರ ಕೊಡಬೇಕಾಗುತ್ತದೆ ಎಂದು ಮಾಳಿ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಗುಮಟಿ ಹೇಳಿದರು.

ರವಿವಾರ ಸಂಜೆ ಮಾಳಿ ಸಮಾಜದ ಪ್ರತ್ಯೇಕ ನಿಗಮ ಸ್ಥಾಪನೆಗೆ ಆಗ್ರಹಿಸಿ ಅಥಣಿ ತಾಲೂಕು ಮಾಳಿ ಸಮಾಜದಿಂದ ಬೆಂಗಳೂರು ಚಲೋ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಅತಿ ಹಿಂದುಳಿದ ಮಾಳಿ ಸಮುದಾಯಕ್ಕೆ ನ್ಯಾಯದೊರಕಿಸಿಕೊಡುವ ಕೆಲಸವನ್ನು ಬೊಮ್ಮಾಯಿ ಸರಕಾರದಲ್ಲಿ ನಡೆಯುತ್ತದೆ ಎಂಬ ನಂಬಿಕೆ ಇದೆ. ಹತ್ತಾರುವ ವರ್ಷದಿಂದ ಕೇವಲ ಮನವಿ ಮೂಲಕ ವಿನಂತಿಸುತ್ತಾ ಬಂದಿದ್ದೇವೆ. ಸದ್ಯಕ್ಕೆ ನಮ್ಮ ಬೇಡಿಕೆ ಇಡೇರದಿದ್ದರೆ ಹೋರಾಟ ಬೇರೆ ರೂಪ ತಾಳಲಿದೆ. ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದ ಶಾಸಕರುಗಳು ಧ್ವನಿ ಎತ್ತಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ತಕ್ಕ ಪಠಕಲಿಸಲು ಮಾಳಿ ಸಮಾಜ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.

ಮಾಳಿ ಸಮಾಜದ ಅಥಣಿ ತಾಲೂಕು ಮುಖಂಡ ಮಹಾಂತೇಶ ಮಾಳಿ ಮಾತನಾಡಿ, ಕೃಷಿ ಕೆಲಸವೇ ಮೂಲ ಉದ್ಯೋಗ ಮಾಡಿಕೊಂಡ ಮಾಳಿ ಮಾಲಗಾರ ಸಮಾಜ ಅನ್ನ ನೀಡುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿದ್ದು, ಇಂತಹ ಕೃಷಿ ಕಾಯಕ ನಿಷ್ಟರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ನೀಡುವ ಕೆಲಸ ಈ ಹಿಂದೇಯೇ ನಡೆಯಬೇಕಿತ್ತು. ಆದರೆ ಮಾಳಿ ಸಮಾಜದ ನಿಗಮ ಮಂಡಳಿ ಸ್ಥಾಪಿಸದಿರುವುದು ವಿಶಾದದ ಸಂಗತಿ. ತಲೆತಲಾಂತರದಿಂದಲೂ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾಳಿ ಮಾಲಗಾರ ಸಮಾಜದವರು ಇವತ್ತೀಗೂ ಕೃಷಿಯನ್ನೇ ಪ್ರಧಾನವಾ ಇಗಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಬರ ಹಾಗೂ ಪ್ರಕೃತಿ ವಿಕೋಪದಂತಹ ಹೊಡೆತದಿಂದ ಕೃಷಿ ನಷ್ಟದಲ್ಲಿದೆ. ಇದನ್ನು ಎಲ್ಲ ಸಮುದಾಯಗಳೊಂದಿಗೆ ಮಾಳಿ ಸಮುದಾಯವೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಮೇಲೆ ಬರಲು ಪ್ರತ್ಯೇಕ ನಿಗಮ ಸ್ಥಾಪನೆ ಅತ್ಯವಷ್ಯವಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ಅನಿವಾರ್ಯವಾಗುತ್ತದೆ ಎಂದರು.

ಈ ವೇಳೆ ಗ್ರಾಪಂ ಸದಸ್ಯ ಪರುಶರಾಮ ಸೋನಕರ, ಆಕಾಶ ಬುಟಾಳಿ, ಶಿವಲಿಂಗ ಬೆಳ್ಳಂಕಿ, ರವಿ ಬಡಕಂಬಿ, ಪ್ರಶಾಂತ ತೋಡಕರ, ಸಂತೋಷ ಬಡಕಂಬಿ, ಧರೆಪ್ಪ ಮಾಳಿ, ಶಿವಾನಂದ ಹಲವೇಗಾರ, ಮಹಾದೇವ ಚಮಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.