Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿ ಚೆಕ್ ಹಸ್ತಾಂತರ

localview news

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ ಗ್ರಾಮದ ಶ್ರೀ ಜ್ಞಾನೇಶ್ವರ ಮೌಳಿ ಮಂದಿರದ ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ಅನುದಾನದಲ್ಲಿ 6.50 ಲಕ್ಷ ರೂ. ಮಂಜೂರು ಮಾಡಲಾಗಿದೆ. ಇದರ ಪೈಕಿ ಮೊದಲನೇ ಕಂತಿನಲ್ಲಿ 3.40 ಲಕ್ಷ ರೂ,ಗಳ ಚೆಕ್ ನ್ನು ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಸೇರಿ ದೇವಸ್ಥಾನದ ಕಮೀಟಿಯವರಿಗೆ ಹಸ್ತಾಂತರಿಸಿದರು.

ಸಂತೋಷ ಪಾಟೀಲ, ಎನ್ ಕೆ ಪಾಟೀಲ, ಉಚಗಾಂವ ಬ್ಲಾಕ್ ಮಾಜಿ ಅಧ್ಯಕ್ಷ ಪ್ರಕಾಶ ಬೆಳಗುಂದ ಪಾಟೀಲ, ನಂದಾ ಕಾಕತ್ಕರ್, ಬಾಳು ಪಾಟೀಲ, ಕೃಷ್ಣ ಮುಗಳೆ, ಗೀತಾ ಸಾವಗಾಂವ್ಕರ್ ಹಾಗೂ ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.