ದೇಶ ಭಕ್ತ ಈಶ್ವರಪ್ಪಗೆ ರಕ್ಷೆಯಾಗಿದೆ ಹಿಂದೂತ್ವ!
ಬೆಂಗಳೂರು: ಕೆಂಪು ಕೋಟೆಯ ಮೇಲೆ ಮುಂದೊಂದು ದಿನ ಹಿಂದೂ ರಾಷ್ಟ್ರದ ಧ್ವಜ ಹಾರಬಹುದು. ಅದು ಗೊತ್ತಿಲ್ಲ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಇಡೀ ರಾಷ್ಟ್ರದಲ್ಲಿ ಸಂಚಲ ಮೂಡಿಸಿದ್ದು, ಸಚಿವ ಈಶ್ವರಪ್ಪ ಬೆನ್ನಿಗೆ ರಾಷ್ಟ್ರ, ದೇಶ ಹಾಗೂ ಹಿಂದೂ ಭಕ್ತರು ಅಪಾರ ಸಂಖ್ಯೆಯಲ್ಲಿ ಅವರಿಗೆ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ.
ಕಟ್ಟಾ ಹಿಂದುತ್ವವಾದಿ, ರಾಷ್ಟ್ರ ಭಕ್ತ, ದೇಶ ಭಕ್ತ, ಸಂಘ ಪರಿವಾರದ ಅಚ್ಚುಮೆಚ್ಚಿನ ಎಲ್ಲದ್ದಕ್ಕೂ ಮಿಗಿಲಾಗಿ ಹಿಂದೂತ್ವದ ಫೈರ್ ಬ್ರ್ಯಾಂಡ್ ಎಂದು ಕರೆಯಲ್ಪಡುವ ನೇರ ನುಡಿಯ ಯುವಕರ ಹಾಗೂ ಹಿಂತ್ವದ ನಾಯಕ ಎಂದು ಗುರುತಿಸಿಕೊಂಡಿರುವ ಸಚಿವ ಕೆ.ಎಸ್.ಈಶ್ವರಪ್ಪನ ವಿರುದ್ಧ ಕಾಂಗ್ರೆಸ್ ಇಲ್ಲ ಸಲ್ಲದ ವಿಷಯವನ್ನು ಇಟ್ಟುಕೊಂಡು ಸನದಲ್ಲಿ ಅಹೋರಾತ್ರಿ ಧರಣಿ ಮಾಡಿ ರಾಜ್ಯದ ಜನರ ಹಿತವನ್ನೆ ಮರೆತು ಕಾಲಹರಣ ಮಾಡಿ ಸದನದ ಗಾಂಭೀರ್ಯತೆ ಕಾಪಾಡದೆ ರಾಜ್ಯದ ಜನರಿಗೆ ಮೋಸ ಮಾಡಿದೆ ಎಂದು ಆಡಳಿತ ಪಕ್ಷದ ನಾಯಕರು, ರಾಜ್ಯದ ಜನರು ದೂರುತ್ತಿದ್ದಾರೆ.
ಸದನದಲ್ಲಿ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷಯ ಇರಲಿಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾಂಗ್ರೆಸ್ ಪಕ್ಷದ ನಡೆಗೆ ಆಕ್ರೋಶ ಹೊರ ಹಾಕಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅಪ್ಪಟ ದೇಶ ಭಕ್ತ, ಕಟ್ಟರ್ ಹಿಂದೂತ್ವವಾದಿ ಹಾಗೂ ಸಂಘ ಪರಿವಾರದ ಮತ್ತು ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಜೊತೆ ಪಕ್ಷ ಕಟ್ಟಿದ ಶ್ರೇಯ ಈಶ್ವರಪ್ಪ ಅವರಿಗೆ ಸಲ್ಲುತ್ತದೆ.