Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿದ್ಯುತ್ ಅಪಘಾತಕ್ಕೆ ಬಾಲಕನ ದುರ್ಮರಣ: 5 ಲಕ್ಷ ರೂ. ಚೆಕ್ ವಿತರಿಸಿದ ಚನ್ನರಾಜ ಹಟ್ಟಿಹೊಳಿ

localview news

ಬೆಳಗಾವಿ : ವಿದ್ಯುತ್ ಅಪಘಾತದಲ್ಲಿ ಮೃತನಾಗಿದ್ದ ಬಾಲಕನ ಕುಟುಂಬಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೆಜಪತಿ ಗ್ರಾಮದ ದಯಾನಂದ ಬಸಪ್ಪ ತಾರಿಹಾಳ ವಿದ್ಯುತ್ ಅಪಘಾತದಲ್ಲಿ ಮರಣ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಈತನ ವಾರಸುದಾರರಾದ ಬಸಪ್ಪ ಗೋವಿಂದ ತಾರಿಹಾಳ ಇವರಿಗೆ ಹೆಸ್ಕಾಂ ವತಿಯಿಂದ 5 ಲಕ್ಷ ರೂ,ಗಳ ಪರಿಹಾರದ ಚೆಕ್ ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಗ್ರಾಮದ ಜನರು, ಬಸಪ್ಪ ಬಂಡುಗೋಳ, ಚಂದ್ರು ಪಾಟೀಲ, ನಾಗರಾಜ ಬಡಿಗೇರ್, ಪರುಶರಾಮ ಸನದಿ, ವಿಠ್ಠಲ ಕೋಲಕಾರ, ಸಂತೋಷ ಬಂಡುಗೋಳ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಹಾಲು ಕರೆಯುವ ಯಂತ್ರ ವಿತರಣೆ:

ಪಶು ಸಂಗೋಪನೆ ಇಲಾಖೆಯ ಅಮೃತ ಯೋಜನೆಯಡಿ ಕುಟ್ಟಲವಾಡಿ ಗ್ರಾಮದ ಮಹಾದೇವಿ ಬಾಳಪ್ಪ ಪೂಜಾರಿ ಇವರಿಗೆ ಹಾಲು ಕರೆಯುವ ಯಂತ್ರವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿತರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಯಾದ ಶ್ರೀಕಾಂತ ಗಾಂವೆ,‌ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.