Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಾರೀಹಾಳದಲ್ಲಿ 57 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

localview news

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರೀಹಾಳ ಗ್ರಾಮದಲ್ಲಿ ಮರಾಠಾ ಸಾಂಸ್ಕೃತಿಕ ಭವನ ಹಾಗೂ ಬೆಳಗಾವಿ ಬಾಗಲಕೋಟ ಮುಖ್ಯ ರಸ್ತೆಯಿಂದ ಜನತಾ ಪ್ಲಾಟ್ ವರೆಗೆ ರಸ್ತೆಯ ಡಾಂಬರೀಕರಣ ಸೇರಿದಂತೆ 57 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಜನರ ಅಪೇಕ್ಷೆಗೆ ತಕ್ಕಂತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕೊರೋನಾ ಮತ್ತು ಪ್ರವಾದಂತಹ ಪ್ರಕೃತಿ ವಿಕೋಪದಿಂದಾಗಿ ನನ್ನ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗದಿದ್ದರೂ ಗ್ರಾಮೀಣ ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಕೆಲಸಗಳಾಗುತ್ತಿವೆ. ಯಾರು ಏನೇ ಹೇಳಿದರೂ ಅಭಿವೃದ್ಧಿ ಕೆಲಸ ಮಾತ್ರ ನಿಂತಿಲ್ಲ. ಚುನಾವಣೆ ಪೂರ್ವದ ನನ್ನ ಭರವಸೆಗಳಿಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಸಹಕಾರಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ಬಸವರಾಜ ಮ್ಯಾಗೋಟಿ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.