Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಒಬ್ಬನೇ 07 ಗಂಟೆಯಲ್ಲಿ 2 ಟ್ರಾಲಿಯಲ್ಲಿ 28 ಟನ್ ಕಬ್ಬು ಹೇರಿದ ಯುವಕ.

localview news

ಅಥಣಿ : ಅಥಣಿ ತಾಲೂಕಿನ‌ ಬರಮಖೋಡಿ ಗ್ರಾಮದ ಅನೀಲ ಕಾಬು ಜಾಧವ ಎಂಬ ಯುವಕ, ತಾನೊಬ್ಬನೇ ಕೇವಲ 07 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.

ಹೌದು ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕನೋರ್ವ ಇಷ್ಟೆ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 09 ಗಂಟೆ 30 ನಿಮಿಷ ಸಮಯ ತಗೊಂಡಿದ್ದ ಇದೀಗ ಜಾಧವ ಗ್ಯಾಂಗಿನ ಅನೀಲ ಕಾಬು ಜಾಧವ ಎಂಬ ಯುವಕ ಎರಡು ಡಬ್ಬಿಯಲ್ಲಿ ಸುಮಾರು 28 ಟನ್ ಕಬ್ಬನ್ನು 07 ತಾಸಿನಲ್ಲಿ ಹೇರಿ ದಾಖಲೆ ನಿರ್ಮಿಸಿ ಹಳೆಯ ದಾಖಲೆಯನ್ನು‌ ಮುರಿದಿದ್ದಾನೆ ಎಂದು ಜಾಧವ ಗ್ಯಾಂಗಿನ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ದಾಖಲೆಯನ್ನು ನೋಡಿ ಪರಿಶೀಲಿಸಿ ದೃಢಿಕರಿಸಿ ಮಾತನಾಡಿದ ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾ.ಪಂ ಸದಸ್ಯ ಪರಶುರಾಮ‌ ಸೋನಕರ ಅವರು ಅನೀಲ ಜಾಧವ ಎರಡು ಟ್ರಾಲಿ‌ ಕಬ್ಬನ್ನು ಸುಮಾರು 07 ಗಂಟೆಯಲ್ಲಿ ಹೇರಿದ್ದು‌‌‌ ನಿಜ, ಇದು ಉಳಿದ ಕಬ್ಬು ಹೇರುವ ಗ್ಯಾಂಗಿನವರಿಗೆ ಸ್ಪೂರ್ಥಿ, ಇಂತಹ ದಾಖಲೆ ನಮ್ಮ ವಾರ್ಡಿನಲ್ಲಿ ಜರುಗಿರುವುದು ನಮಗೂ ಕೂಡ ಹೆಮ್ಮೆ ಎಂದರು.

ಈ ಕಬ್ಬು ಹೇರುವ ವೇಳೆ ಜಾಧವ ಗ್ಯಾಂಗಿನ ಕಾಬು ಜಾಧವ, ಮುತ್ತಪ್ಪ ಜಾಧವ, ಸಕಾರಾಮ ಚವ್ಹಾಣ, ಅನೀಲ ಜಾಧವ, ರಾಜು ಮಾಳಿ, ರಾಮು ಮಾಳಿ, ಲಾಲಸಾಬ ನದಾಫ, ಮುನ್ನಾಸಾಬ ನದಾಫ, ಪಿಂಟು ಗಡದೆ, ಬಾಳು ಮಾನೆ, ದೀಪಕ ಮಾನೆ, ಮಂಜು ಚಮಕೇರಿ, ಜಾಫರ್ ನದಾಫ್, ಸುನೀಲ ಜಾಧವ, ಓಂಕಾರ ಜಾಧವ, ಸಂಜೀವ ಜಾಧವ, ರಾಜು ಜಾಧವ, ಬಸವರಾಜ ಕಡಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.