Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರವಿಚಂದ್ರನ್ ತಾಯಿ ನಿಧನ

localview news

ರವಿಚಂದ್ರನ್‌ ಅವರ ತಾಯಿ ಶ್ರೀಮತಿ ಪಟ್ಟಮ್ಮಾಳ್‌ ವೀರಾಸ್ವಾಮಿ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನಹೊಂದಿದ್ದಾರೆ. 83 ವಯಸ್ಸಿನ ಪಟ್ಟಮ್ಮಾಳ್‌ ಅವರಿಗೆ ರವಿಚಂದ್ರನ್‌, ಬಾಲಾಜಿ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ್‌ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 10.30ರ ನಂತರ ಮನೆಗೆ ಕರೆತಂದು ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ರವಿಚಂದ್ರನ್‌ ತಿಳಿಸಿದ್ದಾರೆ.