Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪತ್ರಕರ್ತರ ಕಲ್ಯಾಣ ನಿಧಿ ಪಾಲಿಕೆಯಲ್ಲಿ 50ಲಕ್ಷಕ್ಕೆ ಹೆಚ್ಚಿಸಿ: ಬೆಳಗಾವಿ ಪತ್ರಕರ್ತರ ಸಂಘದ ಮನವಿ

localview news

ಬೆಳಗಾವಿ : ಮಾನ್ಯತಾ ಕಾರ್ಡ್ ಹೊಂದಿರದ ಹಾಗೂ ಮಾದ್ಯಮ ಪಟ್ಟಿಯಲ್ಲಿರುವ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು, ಉಪಸಂಪಾದಕರು ಹಾಗೂ ಕ್ಯಾಮೆರಾಮೆನ್‌ಗಳಿಗೂ ಆರೋಗ್ಯ ಕಾರ್ಡ್ ನೀಡುವಂತೆ ಆಗ್ರಹಿಸಿ ಬುಧವಾರ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಈಗಾಗಲೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಪತ್ರಕರ್ತರ ಕಲ್ಯಾಣಕ್ಕಾಗಿ ಈಗಾಗಲೇ ₹ ೨೫ ಲಕ್ಷ ಅನುದಾನವನ್ನು ಮೀಸಲಿಟ್ಟು, ಮಾನ್ಯತಾ ಕಾರ್ಡ ಪಡೆದ ಪತ್ರಕರ್ತರಿಗೆ ಹಾಗೂ ಕ್ಯಾಮೆರಾಮೆನ್‌ಗಳ ಕುಟುಂಬ ಸದಸ್ಯರಿಗೆ ಆರೋಗ್ಯ ಕಾರ್ಡ ವಿತರಿಸಿದ್ದು ಸ್ವಾಗತಾರ್ಹ.

ಆದರೆ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಜನರಿಗೆ ಮಾನ್ಯತಾ ಕಾರ್ಡ ನೀಡಲಾಗಿಲ್ಲ. ಆದ್ದರಿಂದ ಕಾರ್ಯ ನಿರ್ವಹಿಸುತ್ತಿವ ವರದಿಗಾರರು, ಉಪಸಂಪಾದಕರು ಹಾಗೂ ಛಾಯಾಗ್ರಾಹಕರುಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಆದ್ದರಿಂದ ಮಹಾನಗರ ಪಾಲಿಕೆಯಲ್ಲಿ ಪತ್ರಕರ್ತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿರುವ ಅನುದಾನವನ್ನು ₹ ೨೫ ಲಕ್ಷದಿಂದ ₹ ೫೦ ಲಕ್ಷಕ್ಕೆ ಹೆಚ್ಚಿಸಿ, ಆರೋಗ್ಯ ಕಾರ್ಡ ವಂಚಿತ ಪತ್ರಕರ್ತರಿಗೆ, ಉಪ ಸಂಪದಾದಕರಿಗೆ, ಪೊಟೊಗ್ರಾಫರ್ ಹಾಗೂ ಕ್ಯಾಮೆರಾಮಾನ್‌ಗಳಿಗೆ ಆರೋಗ್ಯ ಕಾರ್ಡ ನೀಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು, ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೇ ಇನ್ನೂಳಿದ ಪತ್ರಕರ್ತರ ಹಿತವನ್ನು ಕಾಪಾಡುವಲ್ಲಿ ಜಿಲ್ಲಾಡಳಿತ ಕ್ರಮೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹೇಶ ವಿಜಾಪುರ, ಗೌರವ ಅಧ್ಯಕ್ಷ ಹೃಷಿಕೇಶ ದೇಸಾಯಿ, ಕೋಶಾಧ್ಯಕ್ಷ ರಾಯಣ್ಣ.ಆರ್.ಸಿ, ಕಾರ್ಯಾಧ್ಯಕ್ಷ ರಾಜು ಗವಳಿ, ಸಹಲಗೆಗಾರ ಕೇಶವ ಆದಿ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿ ರಾಜಶೇಖರಯ್ಯ ಹಿರೇಮಠ, ಪಾರೇಶ ಭೋಸಲೆ, ಖಜಾಂಚಿಗಳಾದ ಅಶೋಕ ಮುದ್ದಣ್ಣವರ, ಹೀರಾಮಣಿ ಕಂಗ್ರಾಳಕರ, ನಿರ್ದೇಶಕರಾದ ಜಗದೀಶ ವಿರಕ್ತಮಠ, ಸುನೀಲ ಪಾಟೀಲ, ಮಂಜುನಾಥ ಕೋಳಿಗುಡ್ಡ, ಬೈರೋಬಾ ಕಾಂಬಳೆ, ಸಂಜಯ ಸೂರ್ಯವಂಶಿ, ರವಿ ಗೋಸಾವಿ, ಜಗದೀಶ ಹೊಂಬಳಿ, ಏಕನಾಥ ಅಗಸಿಮನಿ, ವಿಜಯ ಮೊಹೀತೆ, ಪ್ರಶಾಂತ ಮಾಲಗಾಂವಿ, ಅರುಣ ಯಳ್ಳೂರಕರ, ನಾಗರಾಜ ಎಚ್.ವಿ., ಗಜಾನನ ಮುಚ್ಚಂಡಿಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.