Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೆರೆಗೆ ಬಾಗಿನ ಅರ್ಪಿಸಿದ ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ : ನಮ್ಮೂರು ನಮ್ಮ ಕೆರೆ ಎಂಬ ಅಭಿಯಾನದೊಂದಿಗೆ ಹಲಗಾದಲ್ಲಿ ಪುನಶ್ಚೇತನಗೊಳಿಸಲಾದ ಕೆರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಬಾಗಿನ ಅರ್ಪಿಸಿದರು. ಕೆರೆ ಪುನಶ್ಚೇತನದಂತಹ ವಿಧಾಯಕ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ಸರ್ವರನ್ನೂ ಶ್ಲಾಘಿಸಿದ ಲಕ್ಷ್ಮಿ ಹೆಬ್ಬಾಳಕರ್, ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಸರಕಾರದ ಮಟ್ಟದಲ್ಲಿ ತಾವು ಮಾಡಿರುವ ಪ್ರಯತ್ನವನ್ನು ವಿವರಿಸಿದರು.

ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ಯೋಜನೆಗಳಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರವನ್ನು ಹಸಿರೀಕರಣ ಮಾಡಲು ಪ್ರಯತ್ನಿಸುತ್ತೇನೆ. ರೈತ ಖುಷಿಯಾಗಿದ್ದರೆ ಇಡೀ ದೇಶವೇ ಖುಷಿಯಾಗಿರಲು ಸಾಧ್ಯ. ಕೃಷಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಹೆಬ್ಬಾಳಕರ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರದೊಂದಿಗೆ ಹಲಗಾ ಗ್ರಾಮ ಪಂಚಾಯತ, ಹಲಗಾ ಕೆರೆ ಅಭಿವೃದ್ಧಿ ಸಮಿತಿ, ಶ್ರೀ ಮಂಜುನಾಥ ನವಜೀವನ ಸಮಿತಿ ಇವರ ಸಹಭಾಗಿತ್ವದಲ್ಲಿ ಕೆರೆ ಪುನಶ್ಚೇತನಗೊಂಡಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಬಾಲಾಚಾರ್ಯ ಶ್ರೀ 108 ಸಿದ್ಧಸೇನಾ ಮುನಿ ಮಹಾರಾಜರು ವಹಿಸಿದ್ದರು.

ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲಾ ಸುರೇಶ ಅಂಗಡಿ, ಚನ್ನಪ್ಪ ಬ ಡಮ್ಮಣಗಿ, ದುಗ್ಗೆಗೌಡ, ಪ್ರದೀಪ ಶೆಟ್ಟಿ, ಗಣಪತಿ ಮಾರಿಹಾಳಕರ್, ಚಾರುಕೀರ್ತಿ ಎಸ್ ಸೈಬಣ್ಣವರ, ಅಣ್ಣಾಸಾಹೇಬ್ ಘೋರ್ಪಡೆ, ಧನ್ಯಕುಮಾರ ದೇಸಾಯಿ, ಗ್ರಾಮದ ಹಿರಿಯರು, ಕೆರೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು, ಗ್ರಾಮ ಪಂಚಾಯತಿ ಪ್ರತಿನಿಧಿಗಳು, ಯೋಜನಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.