Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯುವಕರು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಸದೃಡರಾಗಿ:ಮಾಜಿ ಶಾಸಕ ಸಂಜಯ್ ಪಾಟೀಲ್.

localview news

ಬೆಳಗಾವಿ: ದೇಶದಲ್ಲಿ ನಡೆಯುತ್ತಿರುವ ಕ್ರೀಡೆಗಳಲ್ಲಿ ಭಾಗವಹಿಸಿ ದೇಹವನ್ನ ಸದೃಡವನ್ನಾಗಿ ಮಾಡಿಕೊಂಡು ಆರೋಗ್ಯವಾಗಿರಿ ವಿವಿಧ ಕ್ರೀಡೆಗಳಿವೆ ಭಾಗವಹಿಸಿ ಮಾನಸಿಕ ಕಿನ್ನತೆಗೆ ಒಳಗಾಗದೆ ಧೈರ್ಯದಿಂದಿರಿ ಎಂದು ಹೇಳಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಾಕನೂರು ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಮಾಜಿ ಶಾಸಕ ಸಂಜಯ ಪಾಟೀಲ್.

ಬೆಳಗಾವಿಯಲ್ಲಿ ಹೆಚ್ಚಿನ ಯುವಕರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆಯ ಹಾಗೂ ರಾಜ್ಯದ ಹೆಸರನ್ನ ಉನ್ನತ ಮಟ್ಟಕ್ಕೆ ಬೆಳಸುತ್ತಿರುವುದು ಕಂಡು ಬಂದಿರುವ ವಿಚಾರ ಆದ್ದರಿಂದ ಇನ್ನು ಹೆಚ್ಚಿನ ಯುವಕರೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಯುವಕರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಮಂಡಲದ ಜಿಲ್ಲಾಧ್ಯಕ್ಷ ಧನಂಜಯ್ ಜಾಧವ,ಬಿಜೆಪಿ ಎಸ್ಸಿ ಮೋರ್ಜಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪೃಥ್ವಿ ಸಿಂಗ್ ವಿನಯ್ ಕದಂ, ನಾರಾಯಣ್, ರವಿ ಕೋಕಿತ್ಕರ್, ಭಾಗ್ಯಶ್ರೀ ಕೋಕಿತ್ಕರ್,ಅಮೋಲ್ ಜಾಧವ್, ಕೆಡಿ ಪಾಟೀಲ್, ಅಮೋಲ್ ಮೆನ್ಷೆ, ಕ್ರಿಕೆಟ್ ಪ್ರೇಮಿಗಳ ಸೇರಿದಂತೆ ಇನ್ನು ಹಲವು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.